ಮೇಷ
ಸಮಸ್ಯೆಗಳ ಬಗ್ಗೆಯೇ ಚಿಂತಿಸುತ್ತಾ ಕೂರದಿರಿ. ಅದರಿಂದ ನೆಮ್ಮದಿ ಹಾಳು. ಗುಣಾತ್ಮಕ ವಿಚಾರದತ್ತಲೂ ಗಮನ ಹರಿಸಿ. ಖರ್ಚು ಕಡಿಮೆ ಮಾಡುವುದೊಳಿತು.
ವೃಷಭ
ನಿಮ್ಮ ಸುತ್ತ ಬದಲಾವಣೆ ಬಯಸುವಿರಿ. ಇದೇವೇಳೆ, ನಿಮ್ಮೊಳಗೂ ಬದಲಾವಣೆ ತನ್ನಿ. ಇತರರ ಜತೆ ಆತ್ಮೀಯತೆಯಿಂದ ನಡಕೊಳ್ಳಿ.
ಮಿಥುನ
ಆರೋಗ್ಯ ಸಂಬಂಧಿ ಚಿಂತೆ ಪರಿಹಾರ. ಮನೆಯಲ್ಲಿ ನೆಮ್ಮದಿಯ ವಾತಾವರಣ. ಆರ್ಥಿಕ ಸಮಸ್ಯೆಗೆ ಕೂಡಾ ಪರಿಹಾರ ಸಿಗುವುದು. ಬಂಧುಗಳ ಭೇಟಿ.
ಕಟಕ
ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಸುಧಾರಣೆ ಕಾಣುವುದು. ಆದಾಯ ಹೆಚ್ಚಳ. ಕಠಿಣ ಕೆಲಸವೊಂದು ಇತರರ ಸಹಕಾರದಿಂದ ಕೈಗೂಡುವುದು.
ಸಿಂಹ
ಪ್ರಮುಖ ವಿಷಯದಲ್ಲಿ ಏಕಪಕ್ಷೀಯ ನಿರ್ಧಾರ ತಾಳದಿರಿ. ಸಮಾಲೋಚಿಸಿ ನಿರ್ಧಾರ ತಾಳಿ. ಕೌಟುಂಬಿಕ ಉದ್ವಿಗ್ನತೆ ಹೆಚ್ಚಬಹುದು.
ಕನ್ಯಾ
ಕುಟುಂಬ ಸದಸ್ಯರ ಜತೆ ಭಿನ್ನಾಭಿಪ್ರಾಯ. ಅದು ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳಿ. ವಾದದಿಂದ ದೂರ ಉಳಿಯುವುದೊಳಿತು. ಆರ್ಥಿಕ ಬಿಕ್ಕಟ್ಟು.
ತುಲಾ
ನಿಮ್ಮ ವೃತ್ತಿ ಬದುಕಲ್ಲಿ ಮಹತ್ವದ ಬದಲಾವಣೆ ಉಂಟಾದೀತು. ಅದು ಅಥವಾ ಪ್ರತಿಕೂಲ ಆಗದಂತೆ ಎಚ್ಚರ ವಹಿಸಿ. ಹೊಂದಾಣಿಕೆ ಒಳ್ಳೆಯದು.
ವೃಶ್ಚಿಕ
ಇತರರಿಗೆ ಆರ್ಥಿಕ ನೆರವು ನೀಡುವ ಮುನ್ನ ಯೋಚಿಸಿ. ನಿಮಗೇ ಹಾನಿ ತಂದುಕೊಳ್ಳದಿರಿ. ಕೌಟುಂಬಿಕ ಭಿನ್ನಮತ ಉಂಟಾದರೂ ಬೇಗ ಪರಿಹಾರ ಕಾಣುವುದು.
ಧನು
ನೀವೀಗ ಕೈಗೊಂಡಿರುವ ಕಾರ್ಯವು ಉತ್ತಮ ಫಲ ನೀಡುತ್ತದೆ. ಈ ಕುರಿತು ಚಿಂತೆ ಬೇಡ. ಆಪ್ತೇಷ್ಟರ ಹಿತಾಸಕ್ತಿ ಕಾಯ್ದುಕೊಳ್ಳುವಿರಿ. ಅಪವ್ಯಯ ತಪ್ಪಿಸಿ.
ಮಕರ
ಕುಟುಂಬದ ಇಷ್ಟಾರ್ಥ ಪೂರೈಸಲು ಹೆಚ್ಚಿನ ಗಮನ ಕೊಡುವಿರಿ. ವೃತ್ತಿಯ ಕೆಲಸ ಸಕಾಲದಲ್ಲಿ ಮುಗಿಸಿ. ಇಲ್ಲವಾದರೆ ಸಮಸ್ಯೆ ಎದುರಿಸುವಿರಿ.
ಕುಂಭ
ಯಾವುದೋ ಕೊರತೆ ನಿಮ್ಮನ್ನು ಬಾಧಿಸುವುದು. ಮನದಲ್ಲಿ ಅಸಂತೋಷ. ಹೆಚ್ಚುತ್ತಿರುವ ಖರ್ಚಿನಿಂದ ಚಿಂತೆ. ಅಧ್ಯಾತ್ಮದತ್ತ ಮನಸ್ಸು ಸೆಳೆಯಬಹುದು.
ಮೀನ
ಉಲ್ಲಾಸದ ದಿನ. ಕೆಲದಿನಗಳಿಂದ ಕಾಡುತ್ತಿದ್ದ ಚಿಂತೆ ಪರಿಹಾರ. ಕೆಲಸದಲ್ಲಿ ಹುರುಪು. ಆಪ್ತಬಂಧು ಭೇಟಿ ಸಂಭವ. ಕೌಟುಂಬಿಕ ನೆಮ್ಮದಿ.