ದಿನಭವಿಷ್ಯ: ಇಂದು ಈ ರಾಶಿಯವರಿಗೆ ಲಕ್ಷ್ಮಿ ಕೃಪೆ, ಧನ ವೃದ್ಧಿ!

ಮೇಷ
ಪ್ರಮುಖ ಕಾರ್ಯ ಇಂದಿಗೆ ಇಟ್ಟುಕೊಳ್ಳದಿರಿ. ಅದನ್ನು ಮುಂದೂಡುವ ಪ್ರಸಂಗ ಬರಬಹುದು. ಖಾಸಗಿ ಬದುಕಿನಲ್ಲಿ ಕೆಲವು ಒತ್ತಡ ಅನುಭವಿಸುವಿರಿ.

ವೃಷಭ
ಮನೆಯಲ್ಲಿ ಅಶಾಂತಿ ಉಂಟಾದೀತು. ಸಣ್ಣ ವಿಷಯವನ್ನು ದೊಡ್ಡ ವಿವಾದವಾಗಿ ಪರಿವರ್ತಿಸಬೇಡಿ. ಒತ್ತಡರಹಿತವಾಗಿ ವರ್ತಿಸಿರಿ.

ಮಿಥುನ
ಖಾಸಗಿ ಬದುಕಿಗೆ ಹೆಚ್ಚು ಗಮನ ಕೊಡಿ. ಹೆಚ್ಚು ಹೊಣೆಗಾರಿಕೆ. ಅದನ್ನು ನಿಭಾಯಿಸಲು ಕಷ್ಟ ಪಡುವಿರಿ. ಶೀತಲ ಆಹಾರ, ಪಾನೀಯ ಸೇವಿಸಬೇಡಿ.

ಕಟಕ
ಹೆಚ್ಚುವರಿ ಹೊಣೆಗಾರಿಕೆ ಹೆಗಲೇರುವುದು. ಎಂದಿಗಿಂತ ಹೆಚ್ಚು ಕೆಲಸ ಮಾಡಬೇಕಾಗುವುದು. ಕುಟುಂಬದಲ್ಲಿ ಅಸಹನೆ ಉಂಟಾದೀತು. ಅದಕ್ಕೆ ನಿಮ್ಮ ವರ್ತನೆ ಕಾರಣ.

ಸಿಂಹ
ಅಧಿಕ ಕೆಲಸ. ಅದನ್ನು ನಿಭಾಯಿಸಲು ಕಷ್ಟ ಪಡುವಿರಿ. ಕೌಟುಂಬಿಕ ಉದ್ವಿಗ್ನತೆ. ಸಣ್ಣ ವಿಷಯಕ್ಕೆ ವಾಗ್ವಾದ ನಡೆದೀತು. ಸಹನೆ ಅತಿ ಅವಶ್ಯ.

ಕನ್ಯಾ
ಯಶಸ್ಸು ಇಂದು ಸುಲಭವಾಗಿ ಸಿಗುವುದು. ಕಠಿಣ ಕಾರ್ಯ ಕೂಡ ಸುಲಭದಲ್ಲಿ ಮುಗಿಯುವುದು. ಕೌಟುಂಬಿಕ ಶಾಂತಿ.

ತುಲಾ
ಬಾಕಿ ಇರುವ ಕಾರ್ಯ ಮುಗಿಸಲು ಆದ್ಯತೆ ಕೊಡಿ. ಬಳಿಕ ಹೊಸ ವ್ಯವಹಾರ ಆರಂಭಿಸಿ. ಹಣಕಾಸು ಸಮಸ್ಯೆ ಕಾಡಬಹುದು. ದೈಹಿಕ ನೋವು ಕಾಡೀತು.

ವೃಶ್ಚಿಕ
ನಿಮ್ಮ ಕಾರ್ಯ ಯಶ ಕಂಡರೂ ನೀವು ನಿರೀಕ್ಷಿಸಿದ ಫಲಿತಾಂಶ ದೊರಕುವುದಿಲ್ಲ. ಇದರಿಂದ ನಿರಾಶೆ. ಆಪ್ತರೇ ನಿಮ್ಮ ಟೀಕಾಕಾರರಾಗುವರು.

ಧನು
ಕೆಲಸಗಳೆಲ್ಲ ಪೂರ್ಣ. ಯಾವುದೇ ಕಾರ್ಯ ಬಾಕಿಯುಳಿಯದು. ಹಾಗಾಗಿ ಮನಸ್ಸಿಗೆ ನಿರಾಳತೆ. ಆರೋಗ್ಯ ಸಮಸ್ಯೆ ನಿವಾರಣೆ, ಮಾನಸಿಕ ಶಾಂತಿ.

ಮಕರ
ಬಿಡುವಿಲ್ಲದ ದಿನ. ಕೆಲವು ಉಪಯುಕ್ತ ನಿರ್ಧಾರ ತಾಳಲು ಈ ದಿನ ಬಳಸಿಕೊಳ್ಳಿ. ಕುಟುಂಬಸ್ಥರ ಸಮಸ್ಯೆ ಅರಿತು ಅದನ್ನು ಪರಿಹರಿಸಲು ಯತ್ನಿಸಿ.

ಕುಂಭ
ವೃತ್ತಿಯಲ್ಲಿ ಫಲಪ್ರದ ದಿನ. ಎಲ್ಲರೊಂದಿಗೆ ಉತ್ತಮ ಸಹಕಾರ ಹಾಗೂ ಹೊಂದಾಣಿಕೆ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಆರೋಗ್ಯ ಸದೃಢ.

ಮೀನ
ಯಶಸ್ವಿ ದಿನ. ಬಯಸಿದ ಕಾರ್ಯ ಸಫಲವಾಗುವುದು. ಆರೋಗ್ಯಕ್ಕೆ ಸಂಬಂಧಿಸಿ ಹೆಚ್ಚು ಎಚ್ಚರ ವಹಿಸಿ. ಕೌಟುಂಬಿಕ ಸಹಕಾರ, ಸಾಮರಸ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!