ಮೇಷ
ಹೆಚ್ಚು ಭಾವುಕ ರಾಗುವ ಪ್ರಸಂಗ ಒದಗೀತು. ಭಾವನೆಯ ಮೇಲೆ ಹಿಡಿತವಿರಲಿ.ಇತರರ ಎದುರು ಮುಜುಗರಕ್ಕೆ ಒಳಗಾಗದಿರಿ.
ವೃಷಭ
ಮನೆಯವರ ಜತೆ ಇಂದು ಹೆಚ್ಚು ಕಾಲ ಕಳೆಯುವ ಅವಕಾಶ. ಬಂಧುಗಳ ಭೇಟಿ. ಆರೋಗ್ಯದ ಕುರಿತು ಕಾಳಜಿ ವಹಿಸಿರಿ. ಧನವ್ಯಯ.
ಮಿಥುನ
ಕೌಟುಂಬಿಕ ತೃಪ್ತಿ. ಬದುಕಿನಲ್ಲಿ ಸ್ಥಿರತೆ ಮತ್ತು ಶಾಂತಿ ಕಂಡುಕೊಂಡ ನೆಮ್ಮದಿಯ ಭಾವ. ಆತ್ಮೀಯರ ಭೇಟಿಯ ಸಾರ್ಥಕತೆ. ಸಮಾಧಾನ.
ಕಟಕ
ಹಣ ಗಳಿಕೆ, ವೆಚ್ಚ ಇವೆರಡರ ಮಧ್ಯೆ ಸಮತೋಲನ ಸಾಧಿಸಲು ಸಫಲ. ಕೌಟುಂಬಿಕ ವಲಯದಲ್ಲಿ ಸಂತೋಷ. ಆರೋಗ್ಯ ಸ್ಥಿತಿ ಸುಸ್ಥಿರ.
ಸಿಂಹ
ನಿಮಗಿಂದು ಪೂರಕವಾದ ದಿನವಲ್ಲ. ಕಾರ್ಯಫಲ ದೊರಕುವುದಾದರೂ ತುಂಬಾ ನಿಧಾನವಾಗಿ. ಎಣ್ಣೆ ತಿಂಡಿ ಸೇವನೆ ಆರೋಗ್ಯಕ್ಕೆ ಪ್ರತಿಕೂಲ.
ಕನ್ಯಾ
ಯಶಸ್ವಿ ದಿನ. ಉದ್ದೇಶ ಸಫಲ. ಉದ್ದೇಶಿತ ಕಾರ್ಯ ಉತ್ತಮ ಫಲ ನೀಡುವುದು. ಉಳಿತಾಯ ಹೆಚ್ಚಳ. ಕುಟುಂಬಸ್ಥರ ಮಧ್ಯೆ ಸೌಹಾರ್ದತೆ.
ತುಲಾ
ಸಣ್ಣ ವಿಷಯವನ್ನೂ ಗಂಭೀರವಾಗಿ ಪರಿಗಣಿಸುವ ನಿಮ್ಮ ಸ್ವಭಾವದಿಂದಾಗಿ ಆಪ್ತರ ಜತೆ ವಾಗ್ವಾದ ನಡೆದೀತು. ಸಂಯಮ ತಂದುಕೊಳ್ಳಿ.
ವೃಶ್ಚಿಕ
ಖರ್ಚು ಹೆಚ್ಚಳ. ಆದರೆ ಉತ್ತಮ ಉದ್ದೇಶ ಕ್ಕಾಗಿ ಖರ್ಚು ಮಾಡಿದ ಸಮಾಧಾನ. ಕುಟುಂಬ ಸದಸ್ಯರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಿರಿ.
ಧನು
ಪ್ರತಿಕೂಲ ಪರಿಸ್ಥಿತಿ ಯನ್ನು ನಾಜೂಕಿನಿಂದ ನಿಭಾಯಿಸಿ. ಕೌಟುಂಬಿಕ ಭಿನ್ನಮತವನ್ನು ಸೌಹಾರ್ದ ದಿಂದ ಪರಿಹರಿಸಿಕೊಳ್ಳಿ. ಖರ್ಚು ಹೆಚ್ಚಬಹುದು.
ಮಕರ
ಇಂದಿನ ಬೇಸರದ ಮನಸ್ಥಿತಿಗೆ ನಿಮ್ಮ ಮನೋ ಭಾವವೇ ಕಾರಣ ಹೊರತು ಬೇರೇನಲ್ಲ. ನಿರಾಳವಾಗಿ ರಲು ಪ್ರಯತ್ನಿಸಿ. ಸಣ್ಣ ವಿಷಯಕ್ಕೂ ಖುಷಿ ಪಡಿ.
ಕುಂಭ
ಹೊಸ ಜನರ ಸಂಪರ್ಕ. ಅವರಿಂದ ನಿಮ್ಮ ಕಾರ್ಯಸಿದ್ಧಿ. ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ. ಕೌಟುಂಬಿಕ ಪರಿಸರ ನೆಮ್ಮದಿದಾಯಕ.
ಮೀನ
ನೀವು ಮಾಡುವ ಕಾರ್ಯದಲ್ಲಿ ಶ್ರದ್ಧೆ ವಹಿಸಿ. ಕಾಟಾಚಾರದ ಕೆಲಸ ಫಲ ನೀಡದು. ಖರ್ಚು ಹೆಚ್ಚುವುದು. ಖರೀದಿಯೂ ಅಧಿಕ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ