ಮೇಷ
ಒಳ್ಳೆಯ ಸುದ್ದಿ. ಕಾರ್ಯ ಸಂಪೂರ್ಣ. ಉಳಿತಾಯ ಹೆಚ್ಚು. ಸಂಗಾತಿ ಜತೆಗೆ ಅರಿತು ವ್ಯವಹರಿಸಿದರೆ ಸಮಸ್ಯೆ ಉಂಟಾಗದು.
ವೃಷಭ
ವೃತ್ತಿಗೆ ಆದ್ಯತೆ ಕೊಟ್ಟು ಖಾಸಗಿ ಬದುಕನ್ನು ನಿರ್ಲಕ್ಷಿಸಿದ್ದೀರಿ. ಅದನ್ನು ಬದಲಿಸಿಕೊಳ್ಳಿ. ಖಾಸಗಿ ಹಿತಾಸಕ್ತಿ ನೋಡಿಕೊಳ್ಳಿ. ಪ್ರೀತಿ ಸಂಪಾದಿಸಿ.
ಮಿಥುನ
ಅಧಿಕ ಕೆಲಸ. ಕಾಲಮಿತಿಯಲ್ಲಿ ಕಾರ್ಯ ಮುಗಿಸಬೇಕಾದ ಒತ್ತಡ. ಅಸಹನೆ ಹೆಚ್ಚಳ. ಆದಾಯದ ಹರಿವು ಕಡಿಮೆಯಾಗಲಿದೆ.
ಕಟಕ
ನಿಮ್ಮ ಬದುಕಿನ ವಿಶೇಷ ವ್ಯಕ್ತಿಯ ಕುರಿತು ನಿಮ್ಮ ಧೋರಣೆ ಬದಲಿಸಬೇಕಾದ ಅಗತ್ಯವಿದೆ. ಅವರಿಗೆ ಅಸಮಾಧಾನ ಸೃಷ್ಟಿಸದಿರಿ.
ಸಿಂಹ
ಸಹೋದ್ಯೋಗಿಗಳ ಜತೆ ಸೌಹಾರ್ದ ಸಂಬಂಧ ಬೆಳೆಸಿಕೊಳ್ಳಿ. ಇಂದು ಖರ್ಚು ಅಧಿಕ. ಕೌಟುಂಬಿಕ ಸಂಬಂಧ ಕಾಯ್ದುಕೊಳ್ಳಿ.
ಕನ್ಯಾ
ನಿಮ್ಮ ಸ್ವಭಾವ ಬದಲಿಸಬೇಕಾದ ಅಗತ್ಯವಿದೆ. ಇಲ್ಲವಾದರೆ ಹಲವರ ನಿಷ್ಠುರ ಕಟ್ಟಿಕೊಳ್ಳುವಿರಿ. ಸಂಯಮದ ವರ್ತನೆ ತೋರಿ.
ತುಲಾ
ಕೋಪ ನಿಯಂತ್ರಣ ಅವಶ್ಯ. ರೋಷದಿಂದ ಕೆಲಸ ಕೆಡಬಹುದು. ವೃತ್ತಿಯಲ್ಲಿ ವ್ಯಕ್ತಿಯೊಬ್ಬರು ನಿಮ್ಮ ವಿಶ್ವಾಸಕ್ಕೆ ಮೋಸವೆಸಗುವರು.
ವೃಶ್ಚಿಕ
ಪ್ರೀತಿಸಿದ ವ್ಯಕ್ತಿಯ ಜತೆ ಕಾಲ ಕಳೆಯುವ ಅವಕಾಶ. ಕನಸಿನ ಲೋಕದಲ್ಲಿ ವ್ಯವಹರಿಸುತ್ತಾ ವಾಸ್ತವ ಮರೆಯಬೇಡಿ.
ಧನು
ಅನುಕೂಲಕರ ದಿನ. ಬಾಕಿ ಇರುವ ಕಾರ್ಯ ಸಂಪೂರ್ಣ. ಖರ್ಚು ನಿಯಂತ್ರಣ. ಕೌಟುಂಬಿಕ ಬೇಡಿಕೆಗಳ ಈಡೇರಿಕೆ. ಸಾಂಸಾರಿಕ ನೆಮ್ಮದಿ.
ಮಕರ
ಅಧಿಕಾರದ ಪೈಪೋಟಿಯಲ್ಲಿ ಸಿಲುಕುವಿರಿ. ನಿಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಯೋಜನೆ ರೂಪಿಸಿ. ಆಪ್ತರಿಂದ ಸಂದೇಶ.
ಕುಂಭ
ನಿಮ್ಮ ಕೆಲಸದ ಬಗ್ಗೆ ನಿಮಗೆ ವಿಶ್ವಾಸ ಇರಲಿ. ಸಲ್ಲದ ಅನುಮಾನ ಬೇಡ. ಇತರರ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಕೌಟುಂಬಿಕ ಸೌಹಾರ್ದ.
ಮೀನ
ಆತ್ಮೀಯರ ಸಮ್ಮಿಲನ. ನಿಮ್ಮ ಕಾರ್ಯಕ್ಕೆ ಶ್ಲಾಘನೆ. ಕರುಬುವ ಜನಗಳೂ ನಿಮ್ಮ ಸುತ್ತ ಇದ್ದಾರೆ. ಅವರನ್ನು ಕಡೆಗಣಿಸಿರಿ.