ದಿನಭವಿಷ್ಯ: ಇಂದು ಈ ರಾಶಿಯವರಿಗಿರುತ್ತೆ ಲಕ್ಷ್ಮಿ ಕೃಪೆ

ಮೇಷ
ಇತರರ ಸಮಸ್ಯೆ ಪರಿಹರಿಸುವ ಹೊಣೆ ನಿಮಗೆ ಬರಬಹುದು. ಅದರಿಂದ ದೂರವಿದ್ದರೆ ಒಳಿತು. ವಿವಾದ ನಿಮ್ಮ ಹೆಗಲಿಗೇ ಸುತ್ತಿಕೊಳ್ಳಬಹುದು.

ವೃಷಭ
ಮನಸ್ಸಿಗೆ ತೋಚಿದ್ದನ್ನೆಲ್ಲ ಮಾತನಾಡಬೇಡಿ. ಅದು ಕೆಲವರಿಗೆ ನೋವು ತರಬಹುದು. ಅದರಿಂದ ಮನಸ್ತಾಪ. ಮುಖ್ಯ ಉದ್ದೇಶವೊಂದು ಈಡೇರದೆ ನಿರಾಶೆ.

ಮಿಥುನ
ನಿಮಗಿಷ್ಟವಾದ ಕಾರ್ಯ ಮಾಡಲು ಹಿಂಜರಿಕೆ ಬೇಡ. ಇತರರ ವಿರೋಧವನ್ನು ಲೆಕ್ಕಿಸಬೇಕಾಗಿಲ್ಲ. ಅಂತಿಮವಾಗಿ ನಿಮಗೆ ಯಶಸ್ಸು ಕಾದಿದೆ.

ಕಟಕ
ದಿನವಿಡೀ ಜಡತ್ವ ಕಾಡುವುದು. ಅದರಿಂದಾಗಿ ಕಾರ್ಯ ನಿಧಾನ. ಹೊಣೆಗಾರಿಕೆಯಲ್ಲಿ ಪ್ರಮಾದ ಎಸಗದಂತೆ ಎಚ್ಚರ ವಹಿಸಿರಿ.

ಸಿಂಹ
ವೃತ್ತಿಕಾರ್ಯದಲ್ಲಿ ಜಾಣ್ಮೆಯಿಂದ ನಡಕೊಳ್ಳಿ. ಇತರರ ಜಗಳದಲ್ಲಿ ಮೂಗು ತೂರಿಸಬೇಡಿ. ನೀವೇ ಬಲಿಪಶು ಆಗಬಹುದು.ಕೌಟುಂಬಿಕ ಒತ್ತಡ.

ಕನ್ಯಾ
ನಿಮ್ಮ ಉತ್ತಮ ಕೆಲಸ ಇತರರಿಗೆ ಪ್ರೇರಣೆ ನೀಡುತ್ತದೆ. ಸಾಮಾಜಿಕ ಕಾರ್ಯದಲ್ಲಿ ಮೆಚ್ಚುಗೆ ಪಡೆಯುವಿರಿ. ಆರ್ಥಿಕ ಕೊರತೆ ನೀಗುವುದು, ಬಂಧು ಸಹಕಾರ.

ತುಲಾ
ನಿಮಗಿಂದು ಕರ್ತವ್ಯದಲ್ಲಿ ಏಕಾಗ್ರತೆ ಮೂಡಲಾರದು. ಇದರಿಂದ ಟೀಕೆಗೆ ಎದುರಿಸುವಿರಿ. ಹಿರಿಯರ ಆರೋಗ್ಯಕ್ಕೆ ಗಮನ ಕೊಡಿ.

ವೃಶ್ಚಿಕ
ನಿಮ್ಮ ಆರೋಗ್ಯದ ಕುರಿತಂತೆ ಎಚ್ಚರಿಕೆ ವಹಿಸಬೇಕು. ಆಹಾರ ಸೇವನೆಯಲ್ಲಿ ಹಿತಮಿತ ಸಾಧಿಸಿ. ಪ್ರೀತಿಯ ವಿಷಯದಲ್ಲಿ ಭಾವನಾತ್ಮಕ ಏರುಪೇರು.

ಧನು
ಆತ್ಮೀಯ ಸಂಬಂಧದಲ್ಲಿ ಕೆಲವು ವಿಷಯ ಗೌಪ್ಯವಾಗಿರಲಿ. ಎಲ್ಲರಲ್ಲಿ ಆ ಕುರಿತು ಹೇಳಿಕೊಂಡು ಬರಬೇಡಿ. ಆಪ್ತರೊಬ್ಬರ ಕೋಪ ಎದುರಿಸುವಿರಿ.

ಮಕರ
ದೈನಂದಿನ ಆಹಾರ ಕ್ರಮ ಬದಲಿಸಬೇಡಿ. ಅದರಿಂದ ಆರೋಗ್ಯದ ಮೇಲೆ ಪರಿಣಾಮ ಉಂಟಾಗದಂತೆ ನೋಡಿಕೊಳ್ಳಿ. ವ್ಯವಹಾರದಲ್ಲಿ ಒತ್ತಡ.

ಕುಂಭ
ನಿಮ್ಮ ಸಹನೆ
ಕೆಣಕುವ ಪ್ರಸಂಗ ಎದುರಿಸುವಿರಿ. ಭಾವನೆಗಳ ನಿಯಂತ್ರಣ ಅವಶ್ಯ. ಮನೆಯ ಕೆಲಸಕ್ಕೆ ಆದ್ಯತೆ ನೀಡಿ ನಿರ್ವಹಿಸಿ.

ಮೀನ
ಸಂವಹನದ ಕೊರತೆ, ನಿಮ್ಮ ಉದಾಸೀನತೆ ಆಪ್ತರಲ್ಲಿ ಭಿನ್ನಮತ ಸೃಷ್ಟಿಸಬಹುದು.ಕೌಟುಂಬಿಕ ಅಸಹಕಾರ ಎದುರಿಸುವಿರಿ. ಮೆದು ಮಾತು ಒಳಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!