ದಿನಭವಿಷ್ಯ: ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ? ಯಾರಿಗೆ ನಷ್ಟ?

ಮೇಷ
ನೀವು ಕಾಳಜಿ ವಹಿಸುವ ವ್ಯಕ್ತಿಗಳ ಇಂದಿನ ವರ್ತನೆ ನಿಮ್ಮಲ್ಲಿ ಅಸಹನೆ ತುಂಬಬಹುದು. ದಿನವಿಡೀ ನಿಮ್ಮನ್ನು ಕಾಡಬಹುದು. ಅವರನ್ನು ನಿಯಂತ್ರಿಸಿರಿ.

ವೃಷಭ
ಈ ದಿನ ನಿರುತ್ಸಾಹ ಕಾಡುವುದು. ಕೆಲಸವೊಂದು ಇನ್ನೂ ಪೂರೈಸದ ಹತಾಶೆ. ಬಂಧುಗಳಿಂದ ಟೀಕೆ ಕೇಳಿಬಂದೀತು. ಸಂಯಮ ವಹಿಸಿ.

ಮಿಥುನ
ಕಾರ್ಯವೊಂದು ಈಡೇರುತ್ತದೆ. ನೆಗೆಟಿವ್ ಚಿಂತನೆ ಮನಸ್ಸಿನಿಂದ ತೊಲಗುತ್ತದೆ. ಹಾಗಾಗಿ ನಿರಾಳರಾಗುವಿರಿ. ಕೆಲಸದ ಒತ್ತಡದಿಂದಲೂ ನಿಮಗೆ ಮುಕ್ತಿ.

ಕಟಕ
ಇತ್ತೀಚಿನ ಕೆಲವು ಬೆಳವಣಿಗೆ ನಿಮ್ಮನ್ನು ನಿರಾಶೆಗೆ ದೂಡುತ್ತದೆ.  ಉತ್ಸಾಹ ತುಂಬಿಕೊಳ್ಳಲು ಯತ್ನಿಸಿರಿ. ಗುಣಾತ್ಮಕ ಚಿಂತನೆ ಬೆಳೆಸಿಕೊಳ್ಳಿ. ಕೌಟುಂಬಿಕ ಸಹಕಾರ.

ಸಿಂಹ
ಸಂತೋಷ ಮತ್ತು ಸಫಲ ದಿನ. ನೀವು ಬಯಸಿದ ಕಾರ್ಯ ಈಡೇರುವುದು.  ಇತರರಿಗೆ ನೆರವು ನೀಡುವಿರಿ. ಬಂಧುಗಳಿಂದ ಸಹಕಾರ.

ಕನ್ಯಾ
ಭಾವುಕರಾಗುವ ಪ್ರಸಂಗ ಉಂಟಾದೀತು. ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ. ನೀವು ದುರ್ಬಲರೆಂದು ತೋರಿಸಬೇಡಿ. ಆಪ್ತರ ಜತೆಗೆ ಜಗಳವಾಡದಿರಿ.

ತುಲಾ
ಆದ್ಯತೆಯ ಕೆಲಸ ಮೊದಲು ಮುಗಿಸಿ. ನೀವಾಗಿ ಬೇರೆ ವಿಷಯಕ್ಕೆ ಆದ್ಯತೆ ಕೊಡದಿರಿ. ಪ್ರೀತಿ, ಕುಟುಂಬ, ಕೆಲಸದ ಮಧ್ಯೆ ಸಮನ್ವಯ ಸಾಧಿಸಿರಿ.

ವೃಶ್ಚಿಕ
ನಿಮ್ಮ ಖಾಸಗಿ ಬದುಕಿಗೂ ತುಸು ಗಮನ ಕೊಡಿ. ಕೆಲಸದ ಧಾವಂತದಲ್ಲಿ ಖಾಸಗಿ ಬದುಕು ಮರೆಯಬೇಡಿ. ಸ್ನೇಹಿತರಿಂದ ಟೀಕೆ ಕೇಳುವಿರಿ.

ಧನು
ಮಾನಸಿಕ ಅಥವಾ ದೈಹಿಕ ಕಾರಣದಿಂದ ನಿಮಗಿಂದು ಅಶಾಂತ ಮನಸ್ಥಿತಿ. ಕೆಲಸದಲ್ಲಿ ಏಕಾಗ್ರತೆ ಮೂಡದು. ಒತ್ತಡದ ಕಾರ್ಯ ಇಂದು ಬದಿಗಿಡಿ.

ಮಕರ
ಮನಸ್ಸಿನಲ್ಲಿ ನಿರಾಶೆ, ಅಸಂತೋಷ, ಕೊರಗು. ಅದಕ್ಕೆ ಕೆಲವಾರು ಕಾರಣ ಇರಬಹುದು. ಮನಸನ್ನು ತಹಬಂದಿಗೆ ತಂದುಕೊಳ್ಳಲು ಪ್ರಯತ್ನಿಸಿರಿ.

ಕುಂಭ
ಮನದಲ್ಲಿ ಏನೋ ಕೊರಗು. ನೀವು ಬಯಸಿದ ಬೆಳವಣಿಗೆ ಆಗಿಲ್ಲವೆಂದು ನಿರಾಶೆ. ಸಮಸ್ಯೆ ಎದುರಿಸುವ ಸ್ಥೈರ್ಯ ಹೆಚ್ಚಿಸಿ. ಬಂಧುಗಳಿಂದ ಸಹಕಾರ.

ಮೀನ
ಧಾರ್ಮಿಕ ವಿಚಾರ ಇಂದು ನಿಮಗೆ ಆಪ್ತವಾಗಬಹುದು. ಸಮಸ್ಯೆಗಳನ್ನು ಮರೆಯಲು ಇದರಿಂದ ಸಹಕಾರಿ. ಬಂಧುಗಳ ಭೇಟಿಯಿಂದ ಸಂತಸ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!