ದಿನಭವಿಷ್ಯ: ಇಂದು ಯಾವ ರಾಶಿಗೆ ಶುಭ? ಯಾರಿಗೆ ಅಶುಭ?

ಮೇಷ
ನಿಮ್ಮ ಆಪ್ತರೊಡನೆ ಇತರರು ಸಲುಗೆ ಬೆಳೆಸಿಕೊಳ್ಳುವುದು ನಿಮಗೆ ಅಸಹನೀಯ ಎನಿಸಬಹುದು. ಭಾವನಾತ್ಮಕ ತಳಮಳ. ಸಹನೆ ಕಾಯ್ದುಕೊಳ್ಳಿ.

ವೃಷಭ
ನಿಮ್ಮ ವರ್ತನೆಯಿಂದ ಕೆಲವರ ಮನ ನೋಯಿಸುವಿರಿ. ಸಂಬಂಧದಲ್ಲಿ ಏರುಪೇರು. ಆರೋಗ್ಯ ಸಮಸ್ಯೆ ಚಿಂತೆ ಕಾರಣವಾದೀತು.

ಮಿಥುನ
ಮನೆಯಲ್ಲಿ ಕಾರ್ಯದೊತ್ತಡ. ಬಂಧುಗಳಿಂದ ಕಿರಿಕಿರಿ. ಕೌಟುಂಬಿಕ ಸಮಸ್ಯೆಗೆ ಇತರರಲ್ಲಿ ಪರಿಹಾರ ಕೇಳಬೇಡಿ. ವೃತ್ತಿಯಲ್ಲಿ ಹಿನ್ನಡೆ ಸಂಭವ.

ಕಟಕ
ಆಪ್ತರ ಜತೆ ಅಂತರಂಗದ ಭಾವನೆ ಹಂಚಿಕೊಳ್ಳುವಾಗ ಎಚ್ಚರ ವಹಿಸಿ. ಕೆಲ ವಿಷಯ ಬಹಿರಂಗವಾದರೆ ಅದು ಸಮಸ್ಯೆ ಉಂಟು ಮಾಡಬಹುದು.

ಸಿಂಹ
ಕಾಲಮಿತಿಯಲ್ಲಿ ಕಾರ್ಯ ಪೂರೈಸ ಬೇಕಾದ ಒತ್ತಡ. ಮಿತ್ರರೇ ನಿಮ್ಮ ವಿರುದ್ಧ ತಿರುಗಿ ಬೀಳಬಹುದು. ಕೌಟುಂಬಿಕ ಒತ್ತಡ ಹೆಚ್ಚುವುದು.

ಕನ್ಯಾ
ಮುನಿಸಿ ದೂರವಾಗಿದ್ದ ಆಪ್ತರೊಂದಿಗೆ ಮತ್ತೆ ಸೇರಿಕೊಳ್ಳುತ್ತೀರಿ. ಅವರ ಸಂಗದಲ್ಲಿ ಸಂತೋಷ. ವದಂತಿ ಹರಡುವ ಜನರಿಂದ ದೂರವಿರಿ. ಆರ್ಥಿಕ ಒತ್ತಡ.

ತುಲಾ
ವೈಯಕ್ತಿಕ ಹಿತಾಸಕ್ತಿಗಳನ್ನು ಈಡೇರಿಸಲು ಆದ್ಯತೆ ಕೊಡುತ್ತೀರಿ. ಕುಟುಂಬಸ್ಥರ ಹಿತಾಸಕ್ತಿ ಯನ್ನೂ ನೋಡಿಕೊಳ್ಳಿ. ವೃತ್ತಿಯಲ್ಲಿ ಪೈಪೋಟಿ.

ವೃಶ್ಚಿಕ
ನಿಮಗೆ ಹೊಸ ಅವಕಾಶ ಒದಗಿ ಬರಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಭವಿಷ್ಯದ ಕುರಿತಾದ ಅನಿಶ್ಚಿತತೆ ಇಂದು ಕೊನೆಗೊಂಡೀತು.

ಧನು
ಖಾಸಗಿ ಬದುಕಲ್ಲಿ ಸಮಸ್ಯೆಗಳು. ಬಳಿಕ ತಾನೇತಾನಾಗಿ ಪರಿಹಾರ. ಇತರರಿಗೆ ನೆರವು ನೀಡಲು ಮನ ಮಾಡುತ್ತೀರಿ. ಆರ್ಥಿಕ ಸುಧಾರಣೆ.

ಮಕರ
ಆಪ್ತರ ಭಾವನೆಗಳನ್ನು ಗೌರವಿಸಿ. ನಿಮ್ಮ ಅಭಿಪ್ರಾಯ ಇತರರ ಮನ ನೋಯಿಸದಂತೆ ನೋಡಿಕೊಳ್ಳಿ. ಕೌಟುಂಬಿಕ ಸಹಕಾರ ಪಡೆಯಿರಿ.

ಕುಂಭ
ನಿಮ್ಮ ಸಾಮರ್ಥ್ಯಕ್ಕೆ ನಿಲುಕದ ವಿಷಯದತ್ತ ಕೈಚಾಚದಿರಿ. ನಿರಾಶೆಯಾದೀತು. ಆಪ್ತರೆನಿಸಿದವರೇ ಇಂದು ನಿಮ್ಮಿಂದ ದೂರ ಸರಿಯಬಹುದು.

ಮೀನ
ಕೌಟುಂಬಿಕ ಸಂಭ್ರಮಾಚರಣೆ. ಆದರೆ ವೃತ್ತಿಯಲ್ಲಿ ಒತ್ತಡ ಅನುಭವಿಸುತ್ತೀರಿ. ಸಹೋದ್ಯೋಗಿಗಳ ಅಸಹಕಾರ. ಆರೋಗ್ಯ ಸಮಸ್ಯೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!