ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೂಡ್ಸ್ ರೈಲಿಗೆ ಸಿಲುಕಿ ಗರ್ಭಿಣಿ ಆನೆ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಅಲಿಪುರ್ದೌರ್ ಜಿಲ್ಲೆಯ ಚಪ್ರಮರಿ ಮೀಸಲು ಅರಣ್ಯದಲ್ಲಿ ಇಂದು ಮುಂಜಾನೆ ನಡೆದಿದೆ.
ಆನೆ ಕಾರಿಡಾರ್ ಗಳಲ್ಲಿ ಹಾದು ಹೋಗುವ ರೈಲು ಮಾರ್ಗಗಳಲ್ಲಿ ನಿಗಾ ವಹಿಸುವಂತೆ ರೈಲ್ವೆ ಅಧಿಕಾರಿಗಳು ಸೂಚಿಸಿದ್ದಾರೆ. ಆದರೂ ಇಂದು ಬೆಳಗ್ಗೆ ಈ ಅಚಾತುರ್ಯ ಸಂಭವಿಸಿದೆ.
ಈ ದುರಂತ ಸಂಭವಿಸಿದ ಸ್ಥಳ ಆನೆ ಕಾರಿಡಾರ್ ನಿಂದ ಹೊರಗಿದ್ದು, ಆನೆ ಒಳನುಗ್ಗುವಿಕೆ ಪತ್ತೆ ವ್ಯವಸ್ಥೆ (ಐಡಿಎಸ್) ಯಂತ್ರವನ್ನು ಈ ಪ್ರದೇಶದಲ್ಲಿ ಅಳವಡಿಸಿರದ ಕಾರಣ ಹಳಿಯ ಮೇಲೆ ಕಾಡಾನೆ ಇರುವುದು ಗಮನಕ್ಕೆ ಬಂದಿಲ್ಲ. ಇದರಿಂದ ವೇಗವಾಗಿ ಬಂದ ರೈಲು ಆನೆಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಗರ್ಭಿಣಿ ಕಾಡಾನೆ ಸ್ಥಳದಲ್ಲೇ ಮೃತಪಟ್ಟಿದೆ.
ಗುವಾಹಟಿ ವಿಭಾಗದಲ್ಲಿ ರೈಲ್ವೆ ಇಲಾಖೆ ಆನೆ ಚಲವಲನ ಗುರುತಿಸಲು ಐಡಿಎಸ್ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಇದರಿಂದ ಹಲವು ಅಪಘಾತಗಳು ತಪ್ಪಿವೆ.