ಬನ್ನೇರುಘಟ್ಟ ಮೃಗಾಲಯದಲ್ಲಿ ಗರ್ಭಿಣಿ ಝೀಬ್ರಾ ಸಾವು, ತನಿಖೆಗೆ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 3 ವರ್ಷದ ಕಾವ್ಯಾ ಎಂಬ ಹೆಸರಿನ ಗರ್ಭಿಣಿ ಝೀಬ್ರಾ ಮೃತಪಟ್ಟಿದೆ.

8 ತಿಂಗಳ ಗರ್ಭಿಣಿಯಾಗಿದ್ದ ಝೀಬ್ರಾ ಇನ್ನೂ ಕೆಲವೇ ದಿನಗಳಲ್ಲಿ ಮರಿ ಝೀಬ್ರಾಗೆ ಜನ್ಮ ನೀಡುತಿತ್ತು. ಗಂಡು ಜಿರಾಫೆಗಳು ಬೆನ್ನಟ್ಟುವಾಗ ಅಥವಾ ಚಿರತೆಗಳ ಭಯದಿಂದ ಓಡುವಾಗ ತಡೆ ಬೇಲಿಗೆ ಡಿಕ್ಕಿಯಾಗಿ ಝೀಬ್ರಾ ಮೃತಪಟ್ಟಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಝೀಬ್ರಾಗಳು ಬಹಳ ಸೂಕ್ಷ್ಮಯುತ ಪ್ರಾಣಿಯಾಗಿದ್ದು, ತಪ್ಪಿಸಿಕೊಳ್ಳಲು ಓಡುವುದು ಅವುಗಳ ನೈಸರ್ಗಿಕ ಪ್ರವೃತ್ತಿಯಾಗಿದೆ. ಮೃತಪಟ್ಟ ಝೀಬ್ರಾ ಒತ್ತಡ, ಆಘಾತ ಮತ್ತು ಮಯೋಪತಿಯಿಂದ ಬಳಲುತ್ತಿತ್ತು. ಓಡುವಾಗ ತಡೆ ಬೇಲಿಗೆ ಡಿಕ್ಕಿ ಹೊಡೆದು ತನ್ನನ್ನು ತಾನೇ ಗಾಯಗೊಳಿಸಿಕೊಂಡು, ಮೃತಪಟ್ಟಿದೆ ಎನ್ನಲಾಗಿದೆ. ಈ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ.

ಕಳೆದ ಹಲವು ದಿನಗಳಿಂದ ಬನ್ನೇರುಘಟ್ಟ ಸುತ್ತ ಮುತ್ತ ಚಿರತೆಗ ಹಾವಳಿ ಹೆಚ್ಚಾಗುತ್ತಿದೆ. ಹಲವು ಗ್ರಾಮಗಳಿಗೂ ಚಿರತೆಗಳು ಭೇಟಿ ನೀಡುತ್ತಿದೆ. ಪ್ರಮುಖವಾಗಿ ಬನ್ನೇರುಘಟ್ಟ ಮೃಗಾಲಯದಲ್ಲಿ ಹಲವು ಸಂರಕ್ಷಿತ ವನ್ಯ ಪ್ರಾಣಿಗಳು ಇರುವ ಕಾರಣ ಕಾಡಿನ ಚಿರತೆಗಳು ಇದೇ ಸ್ಥಳದಲ್ಲಿ ಹೆಚ್ಚು ಓಡಾಡುತ್ತಿದೆ. ಚಿರತೆ ಆಗಮನದಿಂದ ತಡೆಗೋಡೆ ಒಳಗಿರುವ ವನ್ಯ ಮೃಗಗಳು ಭಯಗೊಳ್ಳುತ್ತಿದೆ. ದಿಕ್ಕುಪಾಲಾಗಿ ಓಡುತ್ತಿದೆ. ಇದು ಗರ್ಭಿಣಿ ಮೃಗಗಳಿಗೆ ಅಪಾಯ ಹೆಚ್ಚಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!