ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿವಾಹಪೂರ್ವ ಲೈಂಗಿಕತೆ, ಚುಂಬನ, ಸ್ಪರ್ಶ ಹಾಗೂ ದಿಟ್ಟಿಸುವಿಕೆಗೆ ಇಸ್ಲಾಂನಲ್ಲಿ ನಿಷೇಧ ಎಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ.
ಲಿವ್ ಇನ್ ಸಂಬಂಧದಲ್ಲಿರುವ ಅಂತರ್ಧರ್ಮೀಯ ಜೋಡಿಯೊಂದು, ತಮಗೆ ಯುವತಿಯ ಕುಟುಂಬದಿಂದ ಹಾಗೂ ಪೊಲೀಸರಿಂದ ಕಿರುಕುಳವಾಗುತ್ತಿದೆ. ಹೀಗಾಗಿ ರಕ್ಷಣೆ ನೀಡಿ ಎಂದು ಹೈಕೋರ್ಟ್ ಮೊರೆ ಹೋಗಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಲಿವ್ ಇನ್ ಸಂಬಂಧ ಅಸಮ್ಮತಿ ವ್ಯಕ್ತಪಡಿಸಿದೆ.
ಇಸ್ಲಾಂನಲ್ಲಿ ಗಂಡ-ಹೆಂಡತಿ ಬಿಟ್ಟು ಇತರರ ನಡುವೆ (ಅನೈತಿಕ ಸಂಬಂಧ ಹಾಗೂ ವಿವಾಹಪೂರ್ವ ಲೈಂಗಿಕತೆ) ಲೈಂಗಿಕ ಕ್ರಿಯೆ ನಡೆಸುವುದು ನಿಷಿದ್ಧ. ಇದಕ್ಕೆ ‘ಝೀನಾ’ ಎನ್ನುತ್ತಾರೆ. ಅಂತೆಯೇ ವಿವಾಹದ ಮುನ್ನವೇ ಚುಂಬನ, ಗುರಾಯಿಸುವುದು ಹಾಗೂ ಸ್ಪರ್ಶಿಸುವುದು ಕೂಡ ಇಸ್ಲಾಂ ಪ್ರಕಾರ ‘ಹರಾಮ್’ ಆಗಿದೆ’ ಎಂದು ಕೋರ್ಚ್ ಅಭಿಪ್ರಾಯಪಟ್ಟಿತು ಹಾಗೂ ರಕ್ಷಣೆ ಕೋರಿದ್ದ ಜೋಡಿಯ ಅರ್ಜಿ ವಜಾ ಮಾಡಿತು.