ಹೊಸದಿಗಂತ ಶಿವಮೊಗ್ಗ:
ಶಿರಾಳಕೊಪ್ಪ ಪಟ್ಟಣ ಸಮೀಪದ ಮಂಚಿಕೊಪ್ಪದ ಹಕ್ಕಳ್ಳಿ ಎಂಬಲ್ಲಿ ಅಕ್ರಮವಾಗಿ ಬಂಧಿಸಿ ಇರಿಸಿದ್ದ 47 ಜಾನುವಾರುಗಳನ್ನು ಶಿರಾಳಕೊಪ್ಪ ಪೋಲೀಸರು ರಕ್ಷಿಸಿ ಗೋ ಶಾಲೆಗೆ ಬಿಟ್ಟಿದ್ದಾರೆ.
ಶನಿವಾರ ಖಚಿತ ಮಾಹಿತಿ ಮೇರೆಗೆ ಹಕ್ಕಳ್ಳಿ ಗ್ರಾಮದ ಮೌಲಾನಾ ಸಾಜಿದ್ ಅಲಿ ಎಂಬುವವರ ಮಾವಿನ ತೋಟದಲ್ಲಿ ವಧೆಗಾಗಿ ಸಂಗ್ರಹಿಟ್ಟಿದ್ದ ಎರಡು ಎಮ್ಮೆಗಳು ಸೇರಿದಂತೆ 47ಕ್ಕೂ ಹೆಚ್ಚು ಜಾನುವಾರುಗಳನ್ನು ಪಟ್ಟಣದ ಪಿ.ಎಸ್ ಐ ಪ್ರಶಾಂತ ರಕ್ಷಿಸಿ, ಅಕ್ರಮವಾಗಿ ಸಂಗ್ರಹಿಸಿಂದ 250 ಕೆಜಿ ಮಾಂಸ, ಒಂದು ಒಮಿನಿ, ಅಶೋಕ ಲೈಲಾಂಡ್, ಎರಡು ಬೈಕ್, ವಧೆಗಾಗಿ ಬಳಸಿದ ಚಾಕು, ಕತ್ತಿ, ತಕ್ಕಡಿ ವಶಕ್ಕೆ ಪಡೆಯಲಾಗಿದೆ. ಇಷ್ಟು ಬೃಹತ್ ಪ್ರಮಾಣದ ಜಾನುವಾರು ವಶಕ್ಕೆ ಪಡೆದದ್ದು ಇದೇ ಮೊದಲಾಗಿದ್ದು ಪೋಲಿಸ್ ಇಲಾಖೆ ಯ ಮೇಲೆ ಸಾರ್ವಜನಿಕ ರಿಂದ ಪ್ರಶಂಸೆ ವ್ಯಕ್ತವಾಗಿದೆ. ಪ್ರಕರಣದಲ್ಲಿ ಆರೋಪಿತರಾತರಾದ ಜೈನುಲ್ಲ, ಅಕ್ಬರ್ ಸೇರಿದಂತೆ ಉಳಿದ ಹತ್ತಕ್ಕೂ ಹೆಚ್ಚುಜನ ತಲೆಮರೆಸಿಕೊಂಡಿದ್ದಾರೆ. ಪಟ್ಟಣದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಪಿ.ಎಸ್. ಐ. ಪ್ರಶಾಂತ್ ಕುಮಾರ್ ಟಿ.ಬಿ, ಕಾರ್ತಿಕ್, ಬಂಗಾರಪ್ಪ, ಶಿವಶಂಕರ್ ಬಾರ್ಕಿ, ಪ್ರದೀಪ್, ಶಿವಮೂರ್ತಿ ಇನ್ನಿತರ ಪೋಲೀಸ್ ಸಿಬ್ಬಂದಿ ಇದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ