ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಣೇಶ ಚತುರ್ಥಿಗೆ ಬೆಂಗಳೂರಿನಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದು, ಸಾರ್ವಜನಿಕ ಗಣೇಶ ಮಂಡಳಿಗಳು ಮತ್ತು ಮನೆಯಲ್ಲಿ ಸಿದ್ಧತೆ ಬರದಿಂದ ಸಾಗುತ್ತಿದೆ. ಹೀಗಾಗಿ, ಬಿಬಿಎಂಪಿಯು (BBMP) ಗಣೇಶ ಮೂರ್ತಿ ವಿಸರ್ಜನೆಗೆ ಸಕಲ ತಯಾರಿ ಮಾಡಿಕೊಂಡಿದೆ.
41 ಕೆರೆ ಅಂಗಳದಲ್ಲಿ ತಾತ್ಕಾಲಿಕ ಕಲ್ಯಾಣಿಗಳು ಹಾಗೂ 489 ಸಂಚಾರಿ ಟ್ಯಾಂಕ್‌ಗಳನ್ನು ತಯಾರು ಮಾಡಿದೆ.
41 ತಾತ್ಕಾಲಿಕ ಕಲ್ಯಾಣಿಗಳು
ಬೆಂಗಳೂರು ದಕ್ಷಿಣ: ಮೇಪಾಳ್ಯ ಕಲ್ಯಾಣಿ, ಕೋರಮಂಗಲ, ಯಡಿಯೂರು ಕೆರೆ ಕಲ್ಯಾಣಿ, ಕೆಂಪಾಬುವಿ ಕೆರೆ ಕಲ್ಯಾಣಿ, ಗಿರಿನಗರದ ಸ್ವಾಮಿ ವಿವೇಕಾನಂದ ಉದ್ಯಾನವನ ಕಲ್ಯಾಣಿ
ಬೆಂಗಳೂರು ಪಶ್ಚಿಮ: ಸ್ಯಾಂಕಿ ಕೆರೆ ಕಲ್ಯಾಣಿ
ಬೆಂಗಳೂರು ಪೂರ್ವ: ಹಲಸೂರು ಕೆರೆ ಕಲ್ಯಾಣಿ
ಮಹದೇವಪುರ: ಚೇಳಕೆರೆ ಕಲ್ಯಾಣಿ, ಹೊರಮಾವು ಅಗರ ಕಲ್ಯಾಣಿ, ಕಲ್ಕೆರೆ ಕಲ್ಯಾಣಿ, ಬಿ. ನಾರಾಯಣಪುರಕೆರೆ ಕೆರೆ ಕಲ್ಯಾಣಿ, ವಿಭೂತಿಪುರಕೆರೆ ಕಲ್ಯಾಣಿ, ಸಾದರಮಂಗಲ ಕೆರೆ ಕಲ್ಯಾಣಿ, ದೊಡ್ಡನೆಕ್ಕುಂದಿ ಕೆರೆ ಕಲ್ಯಾಣಿ, ಮುನ್ನೇಕೋಳಾಲ ಕೆರೆ ಕಲ್ಯಾಣಿ, ಕಾಡಗೋಡಿ ಕಲ್ಯಾಣಿ (ಕಾಶಿವಿಶ್ವನಾಥ ದೇವಸ್ಥಾನದ ಹತ್ತಿರ), ವರ್ತೂರು ಕೋಡಿ ಹತ್ತಿರದ ಕಲ್ಯಾಣಿ, ಅಯ್ಯಪ್ಪ ದೇವಸ್ಥಾನದ ಹತ್ತಿರ ಕಲ್ಯಾಣಿ, ವಾಗ್ದೇವಿ ವಿಲಾಸ್ ರಸ್ತೆಯ ಪಕ್ಕದ ಶಾಶ್ವತ ಕಲ್ಯಾಣಿ, ವಾಗ್ದೇವಿ ಶಾಲೆಯ ಹತ್ತಿರದ ಕಲ್ಯಾಣಿ ಮತ್ತು ದೇವರಬೀಸನಹಳ್ಳಿ ಕಲ್ಯಾಣಿ
ದಾಸರಹಳ್ಳಿ: ದಾಸರಹಳ್ಳಿ ಕೆರೆಯ ಹತ್ತಿರದ ಕಲ್ಯಾಣಿ
ಬೊಮ್ಮನಹಳ್ಳಿ: ಅಗರ ಕೆರೆ ಕಲ್ಯಾಣಿ, ಸಿಂಗಸಂದ್ರ ಕೆರೆ ಕಲ್ಯಾಣಿ, ಅರಕೆರೆ ಕೆರೆ ಕಲ್ಯಾಣಿ, ಕೊತ್ತನೂರು ಕಲ್ಯಾಣಿ, ಕೂಡ್ಲು ಕಲ್ಯಾಣಿ
ರಾಜರಾಜೇಶ್ವರಿ ನಗರ: ದುಬಾಸಿಪಾಳ್ಯ ಕೆರೆ, ಕೋನಸಂದ್ರ ಕೆರೆ, ಜೆಪಿ ಪಾರ್ಕ್ ಕಲ್ಯಾಣಿ, ಮಲ್ಲತ್ತಹಳ್ಳಿ ಕೆರೆ
ಯಲಹಂಕ ಕೆರೆ: ಅಟ್ಟೂರು ಕೆರೆ, ಅಳ್ಳಾಸಂದ್ರ ಕೆರೆ, ಕೋಗಿಲು ಕೆರೆಯ ಹತ್ತಿರ ಇರುವ ಕಲ್ಯಾಣಿ, ಜಕ್ಕೂರು ಕೆರೆಯ ಹತ್ತಿರ ಇರುವ ಕಲ್ಯಾಣಿ, ರಾಚೇನಹಳ್ಳಿ ಕೆರೆಯ ಹತ್ತಿರ ಇರುವ ಕಲ್ಯಾಣಿ, ಹೆಬ್ಬಾಳ ಕೆರೆ ಕಲ್ಯಾಣಿ, ದೊಡ್ಡಬೊಮ್ಮಸಂದ್ರ ಕೆರೆ ಕಲ್ಯಾಣಿ, ನರಸೀಪುರ ಕೆರೆ ಹತ್ತಿರ ಮತ್ತು ಕುವೆಂಪುನಗರ ಸಿಂಗಾಪುರ ಕೆರೆಯ ಹತ್ತಿರ ಕಲ್ಯಾಣಿ ನಿರ್ಮಿಸಲಾಗಿದೆ.
489 ಸಂಚಾರಿ ಟ್ಯಾಂಕ್‌ಗಳು
ಬಿಟಿಎಂ ಲೇಔಟ್, ಪದ್ಮನಾಭಗರ, ಜಯನಗರ, ಬಸವನಗುಡಿ, ಚಿಕ್ಕಪೇಟೆ, ವಿಜಯನಗರ, ಮಹಾಲಕ್ಷ್ಮೀಪುರ, ರಾಜಾಜಿನಗರ, ಗೋವಿಂದರಾಜನಗರ, ಚಾಮರಾಜಪೇಟೆ, ಮಲ್ಲೇಶ್ವರಂ, ಗಾಂಧಿನಗರ, ಸರ್ವಜ್ಞನಗರ, ಸರ್. ಸಿವಿ ರಾಮಾನ್ ನಗರ, ಪುಲಿಕೇಶಿನಗರ, ಹೆಬ್ಬಾಳ, ಶಿವಾಜಿನಗರ, ಶಾಂತಿನಗರ ವಿಧಾನಸಭಾಕ್ಷೇತ್ರ ಸಂಚಾರಿ ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಈ ವಿಧಾನಸಭಾಕ್ಷೇತ್ರಗಳಲ್ಲಿ ಯಾವ್ಯಾವ ನಗರಗಳಲ್ಲಿ ಸಂಚಾರಿ ಟ್ಯಾಂಕ್‌ಗಳು ನಿಲ್ಲಿಸಲಾಗುತ್ತದೆ ಎಂಬ ಮಾಹಿತಿ ಈ ಲಿಂಕ್ನಲ್ಲಿದೆ.
ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲು 75 ಏಕಗವಾಕ್ಷಿ ಕೇಂದ್ರಗಳನ್ನು ತೆರೆದಿದೆ. ಮೇಲ್ವಿಚಾರಣೆಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿಗಳ ನಿಯೋಜನೆ ಮಾಡಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ https://apps.bbmpgov.in/ganesh2025/ ವೆಬ್ಸೈಟ್ಗೆ ಭೇಟಿ ನೀಡಿ.