Monday, December 22, 2025

ನಕಲಿ ನಂದಿನಿ ತುಪ್ಪಕ್ಕೆ ಕಡಿವಾಣ ಹಾಕೋಕೆ ಕ್ಯೂಆರ್‌ ಕೋಡ್‌ ಸೊಲ್ಯೂಷನ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಮ್ಮ ಹೆಮ್ಮೆಯ ನಂದಿನಿ ತುಪ್ಪಕ್ಕೆ ಎಲ್ಲೆಲ್ಲಿದ ಬೇಡಿಕೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ನಕಲಿ ತುಪ್ಪ ಮಾರಾಟ ಮಾಡುವ ಜಾಲ ಪತ್ತೆಯಾಗಿದೆ. ಇದಕ್ಕೆ ಕಡಿವಾಣ ಹಾಕಲು ಇದೀಗ ಕೆಎಂಎಫ್ ಭರ್ಜರಿ ಪ್ಲಾನ್ ಮಾಡಿದೆ.

ಕೆಎಂಎಫ್‌ಗೂ ನಕಲಿ ಉತ್ಪನ್ನಗಳ ಹಾವಳಿ ಜೋರಾಗಿ ತಟ್ಟಿದೆ. ಅದೂ ಪದೇ ಪದೇ ನಕಲಿ ಹಾವಳಿಗೆ ಸಿಲುಕಿ ನಲುಗುತ್ತಿರೋ ಕೆಎಂಎಫ್ ಈಗ ನಕಲಿ ಶೂರರಿಗೆ ಮಾಸ್ಟರ್ ಸ್ಟ್ರೋಕ್ ಕೊಡಲು ಪ್ಲಾನ್ ರೂಪಿಸಿದೆ. ಇಡೀ ದೇಶದಲ್ಲಿ ತನ್ನದೇ ಆದ ವಿಶಿಷ್ಟ ರುಚಿ ಹೊಂದಿರೋ ಕೆಎಂಎಫ್ ತುಪ್ಪವನ್ನ ನಕಲಿ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಈ ನಕಲಿ ತುಪ್ಪ ಜಾಲವನ್ನ ಪತ್ತೆ ಹಚ್ಚಿದ್ದ ಕೆಎಂಎಫ್ ಈಗ ರಾಜ್ಯಾದ್ಯಂತ ನಕಲಿ ತುಪ್ಪ ಹಾವಳಿ ತಡೆಗಟ್ಟೋಕೆ ನೇರ ಹೆಡ್ ಶಾಟ್ ಕೊಡಲು ಪ್ಲಾನ್ ರೂಪಿಸುತ್ತಿದೆ.

ಇನ್ಮುಂದೆ ನಂದಿನಿ ತುಪ್ಪದ ಪ್ಯಾಕೇಜ್ ಅಥವಾ ಡಬ್ಬಿಯಲ್ಲಿ ಕ್ಯೂಆರ್ ಕೋಡ್ ಈಗ ಇರೋದನ್ನ ಮತ್ತಷ್ಟು ಸ್ಟ್ರಾಂಗ್ ಮಾಡುತ್ತಿದೆ. ಈ ಕ್ಯೂಆರ್ ಕೋಡ್ ಇದ್ದರೆ ನಕಲು ಮಾಡಲು ಆಗೋದಿಲ್ಲ. ಇದರಿಂದ ಗ್ರಾಹಕರಿಗೂ, ಬ್ರ್ಯಾಂಡ್‌ಗೂ ಮೋಸ ಆಗೋದಿಲ್ಲ.

error: Content is protected !!