ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ನಿರೂಪಕಿ ಅನುಪಮಾ ಗೌಡಗೆ ಎಂಗೇಜ್‌ಮೆಂಟ್ ಆಗಿದೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್ ಆಗಿದೆ. ಈ ಬೆನ್ನಲ್ಲೇ ನಟಿ ಸ್ಪಷ್ಟನೆ ನೀಡಿದ್ದಾರೆ. ನನಗೆ ಯಾವ ಎಂಗೇಜ್‌ಮೆಂಟ್ ಆಗಿದೆ? ನನ್ನನ್ಯಾಕೆ ನನ್ನ ಎಂಗೇಜ್‌ಮೆಂಟ್‌ಗೆ ಕರೆದಿಲ್ಲ ಎಂದು ತಮಾಷೆ ಮಾಡಿದ್ದಾರೆ.
ಅನುಪಮಾ ಮಾತನಾಡಿ, ನಾನು ಒಂದು ಸೀಕ್ರೆಟ್‌ನ ಶೇರ್ ಮಾಡಬೇಕಿತ್ತು. ಅದಕ್ಕಾಗಿ ಈ ವಿಡಿಯೋ. ಸಾಮಾನ್ಯವಾಗಿ ನಾನು ರಿಯಾಕ್ಟ್ ಮಾಡಲ್ಲ. ಬೆಳಗ್ಗೆಯಿಂದಲೂ ಶೂಟಿಂಗ್ ಸೆಟ್‌ನಲ್ಲೂ ಎಲ್ಲರೂ ಕಂಗ್ರ್ಯಾಜುಲೇಷನ್ನ್ನೋಸ್ ಅಂತಿದ್ದಾರೆ. ಒಂದೆರಡು ದಿನದಿಂದ ಒಂದಷ್ಟು ಜನ ಮೆಸೇಜ್‌ನಲ್ಲೂ ಕಂಗ್ರ್ಯಾಜುಲೇಷನ್ಸ್ ಹೇಳ್ತಾ ಇದ್ದಾರೆ.
ಏನು ಅಂತಂದರೆ, ಎರಡು ದಿನದ ಹಿಂದೆ ನನ್ನ ಎಂಗೇಜ್‌ಮೆಂಟ್ ಆಯ್ತು. ನನ್ನ ಬೆಸ್ಟ್‌ಫ್ರೆಂಡ್ ರಾಘವ್ ಅವರ ಜೊತೆಗೆ. ಅನ್‌ಫಾರ್ಚುನೇಟ್ಲಿ ನಮ್ಮ ಎಂಗೇಜ್‌ಮೆಂಟ್‌ಗೆ ನಾವು ಅಟೆಂಡ್ ಮಾಡೋಕಾಗಲಿಲ್ಲ. ಯಾಕೆಂದರೆ, ನಮಗೆ ಯಾರೂ ಕೂಡ ಇನ್ಪಾರ್ಮ್ ಮಾಡಲಿಲ್ಲ ನಮ್ಮ ಎಂಗೇಜ್‌ಮೆಂಟ್ ಅಂತ ಎಂದು ತಮಾಷೆ ಮಾಡಿ ಇದೆಲ್ಲ ರೂಮರ್ಸ್ ಎಂದು ತಳ್ಳಿಹಾಕಿದ್ದಾರೆ.



