January21, 2026
Wednesday, January 21, 2026
spot_img

ವಿಬಿ-ಜಿ ರಾಮ್ ಜಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:


ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಮಸೂದೆಗೆ ಅಂಕಿತ ಹಾಕಿದ್ದಾರೆ.

ಈ ಮೊದಲು ಸಂಸತ್, ವಿಬಿ-ಜಿ ರಾಮ್ ಜಿ ಮಸೂದೆ 2025ಗೆ ಅನುಮೋದನೆ ನೀಡಿತ್ತು. ಆ ಮೂಲಕ ಭಾರತದ ಗ್ರಾಮೀಣ ಉದ್ಯೋಗ ಮತ್ತು ಅಭಿವೃದ್ಧಿ ಚೌಕಟ್ಟಿನ ನಿರ್ಣಾಯಕ ಸುಧಾರಣೆಗೆ ಅನುವು ಮಾಡಿಕೊಟ್ಟಿತು. ಈ ಕಾಯ್ದೆ 2005ರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ(ಮನ್ರೇಗಾ) ಬದಲಿಗೆ ಜಾರಿಯಾಗಲಿದೆ. ಹೊಸ ಕಾಯ್ದೆಗೆ ಆಧುನಿಕ, ಸಾಂಸ್ಥಿಕ ಚೌಕಟ್ಟನ್ನು ರೂಪಿಸಲಾಗಿದ್ದು, ಇದು ಜೀವನೋಪಾಯ ಭದ್ರತೆಯನ್ನು ಹೆಚ್ಚಿಸುತ್ತದೆ. ವಿಕಸಿತ ಭಾರತ @2047 ರಾಷ್ಟ್ರೀಯ ಮುನ್ನೋಟಕ್ಕೆ ಪೂರಕವಾಗಿದೆ.

ಈ ಕಾಯ್ದೆ ಗ್ರಾಮೀಣ ಕುಟುಂಬಗಳಿಗೆ ಪ್ರತಿ ಹಣಕಾಸು ವರ್ಷದಲ್ಲಿ 125 ದಿನಗಳ ವೇತನ ಸಹಿತ ಉದ್ಯೋಗಖಾತ್ರಿಯನ್ನು ಖಚಿತಪಡಿಸುತ್ತದೆ ಮತ್ತು ಸಬಲೀಕರಣವನ್ನು ಉತ್ತೇಜಿಸುತ್ತದೆ. ಈ ಮೂಲಕ ಪ್ರಗತಿ, ಅಭಿವೃದ್ಧಿ, ಗರಿಷ್ಠ ಸರ್ಕಾರಿ ಪ್ರಯೋಜನಗಳು ಸಿಗಲಿದ್ದು, ಸಮೃದ್ಧ, ಸ್ಥಿತಿಸ್ಥಾಪಕತ್ವ ಮತ್ತು ಸ್ವಾವಲಂಬಿ ಗ್ರಾಮೀಣ ಭಾರತ ನಿರ್ಮಾಣಕ್ಕೆ ಈ ಕಾಯ್ದೆ ಭದ್ರ ಬುನಾದಿಯನ್ನು ಬಲವರ್ಧನೆಗೊಳಿಸಲಿದೆ.

ಗ್ರಾಮೀಣ ಉದ್ಯೋಗ ವ್ಯವಸ್ಥೆಯಲ್ಲಿ ಪರಿವರ್ತನೆ ತರುವುದಲ್ಲದೆ, ಕಲ್ಯಾಣ ಮಧ್ಯಸ್ಥಿಕೆಯನ್ನು ಅಭಿವೃದ್ಧಿಯ ಏಕೀಕೃತ ಸಾಧನವನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಇದು ಗ್ರಾಮೀಣ ಕುಟುಂಬಗಳಿಗೆ ಆದಾಯ ಭದ್ರತೆಯನ್ನು ಬಲವರ್ಧನೆಗೊಳಿಸುವುದಲ್ಲದೆ, ಆಡಳಿತವನ್ನು ಮತ್ತು ಹೊಣೆಗಾರಿಕೆಯನ್ನು ಆಧುನೀಕರಣಗೊಳಿಸುತ್ತದೆ. ದೀರ್ಘಕಾಲದ ಮತ್ತು ಉತ್ಪಾದಕ ಗ್ರಾಮೀಣ ಸ್ವತ್ತುಗಳನ್ನು ಸೃಷ್ಟಿಸುವ ಮೂಲಕ ವೇತನ ಉದ್ಯೋಗದೊಂದಿಗೆ ಸಂಯೋಜನೆಗೊಂಡಿದೆ.

Must Read