ಅಯೋಧ್ಯೆಯಲ್ಲಿ ರಾಮಲಲಾನ ದರುಶನ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಯೋಧ್ಯೆ (Ayodhya) ರಾಮಮಂದಿರಕ್ಕೆ (Ram Temple) ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಭೇಟಿ ನೀಡಿ ಭಗವಾನ್‌ ರಾಮಲಲಾನ ದರುಶನ ಪಡೆದರು.

ಅಯೋಧ್ಯಾಧಾಮ ತಲುಪಿ ಮೊದಲು ಹನುಮಾನ್ ಗರ್ಹಿಯಲ್ಲಿ ದೇವರ ದರುಶನ ಪಡೆದು ಪೂಜೆ ಸಲ್ಲಿಸಿದರು. ಅರ್ಚಕ ರಾಜು ದಾಸ್, ರಾಷ್ಟ್ರಪತಿಗೆ ಬೆಳ್ಳಿ ಗದೆ, ಬೆಳ್ಳಿ ರಾಮ್ ದರ್ಬಾರ್ ಮತ್ತು ಹಸುವಿನ ಪ್ರತಿಕೃತಿಯನ್ನು ನೀಡಿದರು.

ಹನುಮಂತನಗರಕ್ಕೆ ಭೇಟಿ ನೀಡಿದ ನಂತರ ರಾಷ್ಟ್ರಪತಿಗಳು ಸರಯೂ ಘಾಟ್‌ನ ಆರತಿ ಸ್ಥಳಕ್ಕೆ ತಲುಪಿದರು. ಅಲ್ಲಿ ಅವರು ಮಹಾ ಆರತಿಯಲ್ಲಿ ಭಾಗವಹಿಸಿದರು. ಸರಯೂ ಘಾಟ್‌ನ ಸುತ್ತಲೂ ವೇದಮಂತ್ರಗಳ ಪ್ರತಿಧ್ವನಿ ಕೇಳಿಬಂತು.

ರಾಷ್ಟ್ರಪತಿಯವರೊಂದಿಗೆ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಮತ್ತು ಯುಪಿ ಸರ್ಕಾರದ ಸಚಿವ ಸೂರ್ಯ ಪ್ರತಾಪ್ ಶಾಹಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!