ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ಯಾಡ್ಮಿಂಟನ್ನಲ್ಲಿ ಸೈನಾ ನೆಹ್ವಾಲ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಠಕ್ಕರ್ ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ.
ರಾಷ್ಟ್ರಪತಿ ಭವನದ ಬ್ಯಾಡ್ಮಿಂಟನ್ ಕೋರ್ಟ್ನಲ್ಲಿ ನಡೆದ ಈ ಪಂದ್ಯವು ರಾಷ್ಟ್ರಪತಿಯ ಕ್ರೀಡಾ ಉತ್ಸಾಹವನ್ನು ಪ್ರದರ್ಶಿಸಿತು. ರಾಷ್ಟ್ರಪತಿ ಮುರ್ಮು ಅವರು ಸೈನಾ ಅವರೊಂದಿಗೆ ಬ್ಯಾಡ್ಮಿಂಟನ್ ಆಡುವಾಗ ಅನುಭವಿ ಆಟಗಾರರಂತೆ ಆಡಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೈನಾ ನೆಹ್ವಾಲ್ ಅವರೊಂದಿಗೆ ಆಟವನ್ನು ಆನಂದಿಸುತ್ತಿರುವ ದೃಶ್ಯಗಳು ವೈರಲ್ ಆಗಿದೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸೈನಾ ನೆಹ್ವಾಲ್, ಈ ಅನುಭವ ಅವಿಸ್ಮರಣೀಯ ಎಂದು ಬಣ್ಣಿಸಿದ್ದಾರೆ. ಅವರು ತಮ್ಮ ಖುಷಿಯನ್ನು ಹೀಗೆ ಹಂಚಿಕೊಂಡರು. ಇದು ನನ್ನ ಜೀವನದ ಸ್ಮರಣೀಯ ದಿನ. ನನ್ನೊಂದಿಗೆ ಬ್ಯಾಡ್ಮಿಂಟನ್ ಆಡಿದ್ದಕ್ಕಾಗಿ ರಾಷ್ಟ್ರಪತಿ ಮುರ್ಮು ಅವರಿಗೆ ತುಂಬಾ ಧನ್ಯವಾದಗಳು ಎಂದಿದ್ದಾರೆ.
Beautiful video from Rashtrapati Bhavan of President Draupadi Murmu playing Badminton with former World No. 1 Badminton 🏸 star Saina Nehwal pic.twitter.com/9UFJV0peN2
— Amitabh Chaudhary (@MithilaWaala) July 11, 2024