ಶ್ರೀಲಂಕಾ ಕ್ರೀಡಾ ಸಚಿವನಿಗೆ ಗೇಟ್ ಪಾಸ್ ಕೊಟ್ಟ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶ್ರೀಲಂಕಾದ ಕ್ರಿಕೆಟ್ ಮಂಡಳಿಯಲ್ಲಿನ (Sri Lanka Cricket Board) ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಿದ ನನ್ನನ್ನು ಲಂಕಾದ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ (Ranil Wickremesinghe) ಅವರು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಲಂಕಾದ ಕ್ರೀಡಾ ಸಚಿವ ರೋಷನ್ ರಣಸಿಂಘೆ (Roshan Ranasinghe) ಆರೋಪದ ಬೆನ್ನಲ್ಲೇ ಸಚಿವ ಸ್ಥಾನದಿಂದ ಅವರನ್ನು ಕೆಳಗಿಳಿಸಲಾಗಿದೆ.

ವಾರದ ಕ್ಯಾಬಿನೆಟ್ ಸಭೆಗೂ ಮುನ್ನ ರೋಷನ್ ರಣಸಿಂಘೆ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ಶ್ರೀಲಂಕಾ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಚಿವ ಸ್ಥಾನದಿಂದ ವಜಾಗೊಳ್ಳುವ ಮೊದಲು ಅಧ್ಯಕ್ಷರಿಂದ ಇರುವ ಜೀವ ಬೆದರಿಕೆಯ ಬಗ್ಗೆ ಮಾತನಾಡಿದ್ದ ರೋಷನ್ ರಣಸಿಂಘೆ, ಕ್ರಿಕೆಟ್ ಮಂಡಳಿಯಲ್ಲಿನ ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸಿದ್ದ ನನ್ನನ್ನು ಹತ್ಯೆ ಮಾಡುವ ಸಂಚು ನಡೆಯುತ್ತಿದೆ. ಇದರಿಂದ ನಾನು ತುಂಬ ಭಯಭೀತನಾಗಿದ್ದೇನೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯ ನಿರ್ವಹಣೆಗೆ ಸಂಬಂಧಿಸಿದಂತೆ ಅಧ್ಯಕ್ಷ ವಿಕ್ರಮಸಿಂಘೆ ಹಾಗೂ ನನ್ನ ನಡುವೆ ತೀವ್ರ ಭಿನ್ನಾಭಿಪ್ರಾಯ ಉಂಟಾಗಿದೆ. ಒಂದು ವೇಳೆ ನಾನು ರಸ್ತೆಯಲ್ಲಿ ಹತನಾದರೆ ಅದಕ್ಕೆ ಲಂಕಾದ ಅಧ್ಯಕ್ಷ ರನಿಲ್ ವಿಕ್ರಮಸಿಂಘೇ ಮತ್ತು ಮುಖ್ಯಾಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಆರೋಪಿಸಿದ್ದರು.

ಆದರೆ ಈ ಬಗ್ಗೆ ಅಧ್ಯಕ್ಷ ರನಿಲ್ ವಿಕ್ರಮಸಿಂಘೇ ಅವರಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದರೂ, ಕ್ರೀಡಾ ಸಚಿವ ರೋಷನ್ ರಣಸಿಂಘೆ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here