ಮಕ್ಕಳ ಜೊತೆ ರಕ್ಷಾ ಬಂಧನ ಆಚರಿಸಿದ ಪ್ರಧಾನಿ: ಮೋದಿಗೆ ವಿಶೇಷ ರಾಖಿ ಕಟ್ಟಿದ ಬಾಲಕಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ದೇಶದಲ್ಲಿ ರಕ್ಷಾಬಂಧನ ಸಂಭ್ರಮ. ಈ ಕ್ಷಣ ಮುಂಜಾನೆಯಿಂದಲೇ ಪ್ರಧಾನಿ ನರೇಂದ್ರ ಮೋದಿಯವರ ನಿವಾಸದ ಎದುರು ವಿವಿಧ ಶಾಲೆಗಳ ಬಾಲಕಿಯರು ತಾಸುಗಟ್ಟಲೆ ಕಾದು ಮೋದಿಗೆ ರಾಖಿ ಕಟ್ಟಿ ಸಂಭ್ರಮಾಚರಿಸಿದರು.

Image

ಪ್ರಧಾನಿಯ ಸುತ್ತಲೂ ಸೇರಿದ್ದ ಮಕ್ಕಳು ಮೋದಿಗೆ ತಾವು ತಯಾರಿಸಿದ ವಿಶೇಷವಾದ ರಾಖಿಗಳನ್ನು ಕಟ್ಟಿದರು. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ತಾಯಿ ಹೀರಾಬೆನ್ ಮೋದಿ ಅವರ ಪಾದ ತೊಳೆಯುತ್ತಿರುವ ಫೋಟೋವನ್ನೊಳಗೊಂಡ ಬೃಹತ್ ರಾಖಿಯನ್ನು ತಯಾರಿಸಿದ್ದ ಬಾಲಕಿ ಗಮನ ಸೆಳೆದಳು. ಆ ರಾಖಿಯನ್ನು ತನ್ನ ಕೈಗೆ ಕಟ್ಟಿದ ಬಾಲಕಿಯ ಜೊತೆ ಮೋದಿ ಕೆಲಕಾಲ ಮಾತನಾಡಿದರು.

Image

ವಿದ್ಯಾರ್ಥಿಗಳು ರಾಖಿ ಕಟ್ಟಲು ಮುಂದಾದಾಗ, ಪ್ರಧಾನಿ ಮೋದಿ ಅವರನ್ನು ಪ್ರೀತಿಯ ನಗುವಿನೊಂದಿಗೆ ಸ್ವಾಗತಿಸಿದರು, ಅವರ ಹೆಸರು ಮತ್ತು ತರಗತಿಗಳನ್ನು ಕೇಳಿದರು .

Imageಪಿಎಂ ಮೋದಿ ಅವರು ಕುರ್ಚಿಯ ಮೇಲೆ ಕುಳಿತಿದ್ದು, ಅವರಿಗೆ ರಾಖಿಗಳನ್ನು ಕಟ್ಟಲು ಶಾಲಾ ವಿದ್ಯಾರ್ಥಿನಿಯರು ಸರದಿಯಲ್ಲಿ ಕಾಯುತ್ತಿದ್ದರು.

Image

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!