ದೇವೇಗೌಡ, ಎಚ್ ಡಿ ಕೆ, ರೇವಣ್ಣ ಜತೆಗೆ ಪ್ರಧಾನಿ ಮೋದಿ ಖುಷಿಖುಷಿ ಫೋಟೊ ಪೋಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಗುರುವಾರ ಪ್ರಧಾನಿ ಕಾರ್ಯಾಲಯದಲ್ಲಿ ನರೇಂದ್ರ ಮೋದಿಯವರು ದೇವೇಗೌಡರು ಮತ್ತವರ ಕುಟುಂಬ ಸದಸ್ಯರ ಜತೆ ತೆಗೆಸಿಕೊಂಡಿರುವ ಫೋಟೋಗಳೀಗ ವೈರಲ್. ಪ್ರಧಾನಿ ನರೇಂದ್ರ ಮೋದಿಯವರೇ ಈ ಚಿತ್ರಗಳನ್ನು ತಮ್ಮ ಎಕ್ಸ್ ಖಾತೆ ಮೂಲಕ ಹಂಚಿಕೊಂಡಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರ ಜತೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಮತ್ತು ರೇವಣ್ಣ ಸಹ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದಾರೆ. ಮತ್ತೊಂದು ಚಿತ್ರದಲ್ಲಿ ಪ್ರಜ್ವಲ್ ರೇವಣ್ಣ ಸಹ ಇದ್ದಾರೆ.
“ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿ ಮತ್ತು ರೇವಣ್ಣರನ್ನು ಭೇಟಿಯಾಗುವುದು ಯಾವತ್ತಿಗೂ ಸಂತಸದ ಸಂಗತಿ. ದೇಶದ ಪ್ರಗತಿಗೆ ದೇವೇಗೌಡರ ಕೊಡುಗೆಯನ್ನು ಭಾರತವು ಯಾವತ್ತೂ ನೆನಪಿನಲ್ಲಿಡುತ್ತದೆ.

ಅನೇಕ ನೀತಿ ನಿರೂಪಣಾ ವಿಷಯಗಳ ಮೇಲೆ ದೇವೇಗೌಡರ ವಿಚಾರಗಳು ಒಳನೋಟ ಮತ್ತು ಭವಿಷ್ಯದ ದೂರದೃಷ್ಟಿಗಳಿಂದ ಕೂಡಿದ್ದಾಗಿವೆ” ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!