ಹೊಸದಿಗಂತ ವರದಿ, ಹಾವೇರಿ:
ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದಲ್ಲಿ ಮಾಡಿರುವ ಭಾಷಣ ನೋಡಿದರೆ ಅವರು ತಮ್ಮ ಮೇಲೆ ಇರುವ ಮೂಲಭೂತ ಜವಾಬ್ದಾರಿ ಮರೆತಂತಿದೆ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಆರೋಪಿಸಿದರು.
ಹಾವೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು ಮೋದಿ ಒಂದು ಸಮುದಾಯವನ್ನು ಗುರುತಿಸಿ ಗುರಿ ಮಾಡಿರುವ ಸಂದೇಶಕ್ಕೆ ನಮ್ಮ ಆಕ್ಷೇಪವಿದೆ. ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಚುನಾವಣಿ ಮಾಡುತ್ತದೆ ಎಂದರೇ ಈ ಕೂಡಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಅವರು ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹರಿಪ್ರಸಾದ್ ಒತ್ತಾಯಿಸಿದರು.
ನಾವು ಕಟ್ಟುವ ತೆರಿಗೆ ಒಂದೇ ಒಂದು ಸಮುದಾಯಕ್ಕೆ ಹೋಗುತ್ತದೆ ಎನ್ನುವದು ತಪ್ಪು. ತೆರಿಗೆಯನ್ನು ಯಾವುದೇ ಒಂದು ಸಮುದಾಯವಾಗಲಿ ಧರ್ಮವಾಗಲಿ ಜಾತಿಯಾಗಲಿ ಕಟ್ಟಿರುವದಿಲ್ಲಾ. ಜಿಎಸ್ಟಿ ಬಂದ ನಂತರ ಭಿಕ್ಷುಕ ಸಹ ತೆರಿಗೆ ಕಟ್ಟುತ್ತಿದ್ದಾನೆ. ಈ ರೀತಿ ಬಂದ ಹಣವನ್ನ ಜನಪ್ರತಿನಿಧಿಗಳು ಎಲ್ಲರಿಗೂ ಸಮಾನವಾಗಿ ಹಂಚಬೇಕಾಗುತ್ತದೆ. ಅದನ್ನ ಪ್ರಧಾನಿ ನರೇಂದ್ರ ಮೋದಿ ಮರೆತಿರುವಂತೆ ಕಾಣುತ್ತದೆ ಎಂದು ಹರಿಪ್ರಸಾದ್ ಆರೋಪಿಸಿದರು. ಇವತ್ತಿನ ದಿನಪತ್ರಿಕೆ ನೋಡಿದರೆ ಬಿಜೆಪಿಯವರು ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದಂತಿದೆ ಎಂದು ಹರಿಪ್ರಸಾದ್ ಆರೋಪಿಸಿದರು.
ಸಂವಿಧಾನ ಬದಲಾವಣಿ ಮಾಡಿದರೆ ಅದರ ಪೆಟ್ಟು ದಲಿತರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರಿಗೆ ಎಂದು ಹರಿಪ್ರಸಾದ್ ಆರೋಪಿಸಿದರು. ಜಾಹಿರಾತಿನಲ್ಲಿ ನಕ್ಸಲ್ ಅಟ್ಯಾಕ್ ಬಗ್ಗೆ ಹೇಳಿದ್ದಾರೆ ರಾಜ್ಯದಲ್ಲಿ ನಕ್ಷಲ್ ಅಟ್ಯಾಕ್ ಬಗ್ಗೆ ಗೊತ್ತಿಲ್ಲಾ. ಆದರೆ ನಕ್ಸಲ್ ಅಟ್ಯಾಕ್ ಅಂತ ಹೇಳಿದ್ದಾರೆ.
19 ರಾಜ್ಯಗಳಲ್ಲಿ ನಾನು ಕೆಲಸ ಮಾಡಿದ್ದೇನೆ. ಮಹಾರಾಷ್ಟ್ರ ಚತ್ತಿಸಗಡ್, ಒಡಿಸ್ಸಾದಲ್ಲಿ ಕೆಲಸ ಮಾಡಿದ್ದೇನೆ ಹಿಂದೆ ನಕ್ಸಲ್ ಅಟ್ಯಾಕ್ ಮಾಡಿದಾಗ 27 ಕಾಂಗ್ರೆಸ್ ನಾಯಕರನ್ನು ಕಳೆದುಕೊಂಡಿದ್ದೇವೆ. ನಕ್ಸಲ್ ನವರು ಹಾಗೂ ಬಿಜೆಪಿ ಸೂತ್ರದಾರರ ನಡುವೆ ಒಳ್ಳೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದಾರೆ ಎಂದು ಹರಿಪ್ರಸಾದ್ ಆರೋಪಿಸಿದರು.
ಇವರು ಪ್ರಣಾಳಿಕೆಯಲ್ಲಿ ತಾವು ಸಾಲ ಯಾವುದಕ್ಕೆ ಮಾಡಿದ್ದೇವೆ ಎಂದು ಹೇಳಿಲ್ಲಾ.ಇವರು ಯಾವುದೇ ಕಾರ್ಯಕ್ರಮಗಳನ್ನ ಮಾಡದ ಕಾರಣ ಪ್ರಣಾಳಿಕೆಯಲ್ಲಿ ಏನೂ ಕಾಣಿಸಿಲ್ಲಾ ಎಂದು ಹರಿಪ್ರಸಾದ್ ಆರೋಪಿಸಿದರು.
ಮಹಿಳೆಯರ ಮೇಲೆ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಸಾಕಷ್ಟು ದೌರ್ಜನ್ಯ ನಡೆದಿದೆ. ಮಣಿಪುರದಲ್ಲಿ ದಲಿತ ಮಹಿಳೆಯರ ಮೇಲೆ ದೌರ್ಜನ್ಯದ ಬಗ್ಗೆ ಪ್ರಧಾನಿ ಚಕಾರ ಎತ್ತುವದಿಲ್ಲಾ. ರಾಜ್ಯದಲ್ಲಿನ ಮಹಿಳೆಯರ ಅತ್ಯಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಹರಿಪ್ರಸಾದ ತಿರುಗೇಟು ನೀಡಿದರು.
ಇವರು ಮಹಿಳೆಯರು,ರೈತರ, ವಿದ್ಯಾರ್ಥಿಗಳು ಯುವಕರ ಬಗ್ಗೆ ಕಾರ್ಯಕ್ರಮ ರೂಪಿಸಲ್ಲ. ಇಂತವರು ಪತ್ರಿಕೆಗಳಲ್ಲಿ ಜಾಹಿರಾತು ನೀಡುತ್ತಿದ್ದಾರೆ. ಯಾರೋ ಒಬ್ಬ ಕೊಲೆ ಮಾಡಿದ್ದಕ್ಕೆ ಇಡೀ ಸಮುದಾಯ ಹೇಳೋಕೆ ಆಗಲ್ಲ ಎಂದು ತಿಳಿಸಿದರು. ಈ ಕುರಿತಂತೆ ಸಿಎಂ ಹೇಳಿಕೆ ಡಿಸಿಎಂ ಹೇಳಿಕೆ ಗೃಹ ಸಚಿವರ ಹೇಳಿಕೆ ಬಗ್ಗೆ ನಾನು ಟಿಪ್ಪಣಿ ಕೊಡೋಲ್ಲ ಎಂದು ಹರಿಪ್ರಸಾದ್ ತಿಳಿಸಿದರು.
ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರ ಕುರಿತು ಮಾತನಾಡಿದ ಅವರು, ಬಿಜೆಪಿಯವರು ಜೀವಮಾನದುದ್ದಕ್ಕೂ ಸಹ ಆಪರೇಶನ್ ಕಮಲ ಮಾಡಿಕೊಂಡು ಬಂದಿದಾರೆ. ಆಪರೇಶನ್ ಕಮಲ ಮಾಡೋದ್ರಲ್ಲಿ ಇಡೀ ಪ್ರಪಂಚದಲ್ಲಿ ಇವರಷ್ಟು ಕುಖ್ಯಾತಿ ಪಡೆದವರಿಲ್ಲ. ಮುಂದೆನೂ ಆಪರೇಶನ್ ಕಮಲ ಮಾಡ್ತಾರೆ, ಆದರೆ ಅದು ಯಶಸ್ವಿ ಆಗಲ್ಲ ಎಂದರು.
ಬಿಜೆಪಿಯಿಂದ ಕಾಂಗ್ರೆಸ್ ಡೇಂಜರ್ ಜಾಹೀರಾತು ನೀಡಿದ ವಿಚಾರ ಕುರಿತಂತೆ ಮಾತನಾಡಿದ ಅವರು, ಬಿಜೆಪಿದಿನಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟಿರುವದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿಯವರು ಜಾಹೀರಾತಿನಲ್ಲಿ ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸ್ತಿದ್ದಾರೆ ಎಂದು ಆರೋಪಿಸಿದರು.