ಹೊಸದಿಗಂತ ಡಿಜಿಟಲ್ ಡೆಸ್ಕ್;
ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಬರೆದು ಸಂತಾಪ ಸೂಚಿಸಿದ್ದಾರೆ. ಈ ಪತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿರುವ ಕಿಚ್ಚ ನಿಮ್ಮ ಸಾಂತ್ವಾನವು ನನ್ನ ಹೃದಯ ತಟ್ಟಿದೆ ಎಂದು ಬರೆದುಕೊಂಡಿದ್ದಾರೆ.
ಮೋದಿ ಪತ್ರದಲ್ಲೇನಿದೆ?
ಶ್ರೀ ಸುದೀಪ್ ಸಂಜೀವ್ ಅವರೇ, ನಿಮ್ಮ ತಾಯಿ ಶ್ರೀಮತಿ ಸರೋಜಾ ಸಂಜೀವ್ ಅವರ ನಿಧನದ ಸುದ್ದಿ ಕೇಳಿ ನನಗೆ ಆಳವಾದ ದುಃಖವಾಗಿದೆ. ತಾಯಿಯ ಅಗಲಿಕೆ ತುಂಬಲಾರದ ನಷ್ಟ. “ಮಾತುಲಕಿ ಮಾರ್ದವಂ ಸಾಮ್ಯಶೂನ್ಯಮ್” ಎಂದು ಹೇಳಿದಂತೆ, ತಾಯಿಯ ಹೃದಯದ ಮೃದುತ್ವಕ್ಕೆ ಈ ಜಗತ್ತಿನಲ್ಲಿ ಬೇರೆ ಸಾಟಿಯಿಲ್ಲ. ನಿಮ್ಮ ಭಾವನಾತ್ಮಕ ವೇದನೆ ಅವಳೊಂದಿಗೆ ಮುರಿಯಲಾಗದ ಬಂಧವನ್ನು ಪ್ರತಿಬಿಂಬಿಸುತ್ತದೆ ಇದೇ ವೇಳೆ ನಿಮ್ಮ ಮತ್ತು ಕುಟುಂಬದ ಮೇಲೆ ಅಕೆ ಬೀರಿದ ಪ್ರಭಾವವನ್ನು ಒತ್ತಿಹೇಳುತ್ತದೆ. ಅವಳು ನಿಮ್ಮ ನೆನಪುಗಳಲ್ಲಿ ಬದುಕುವುದನ್ನು ಮುಂದುವರಿಸುತ್ತಾಳೆ ಮತ್ತು ಅವಳಿಂದ ತುಂಬಿದ ಮೌಲ್ಯಗಳು ನಿಮಗೆ ಸ್ಫೂರ್ತಿ ನೀಡುತ್ತವೆ ಎಂದು ನನಗೆ ನಂಬಿಕೆ ಇದೆ.
ನಿಮ್ಮ ಜೀವನದಲ್ಲಿ ನಿಜವಾಗಿಯೂ ಅತ್ಯಂತ ಕಷ್ಟಕರವಾದ ಹಂತ ಯಾವುದು, ನಾನು ಬಲ್ಲೆ. ನನ್ನ ಆಳವಾದ ಸಂತಾಪ ಮತ್ತು ಸಹಾನುಭೂತಿ. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಕುಟುಂಬ ಮತ್ತು ಹಿತೈಷಿಗಳೊಂದಿಗೆ ಇದೆ.ಈ ನಷ್ಟ, ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ನಿಮಗೆ ದಯಪಾಲಿಸಲಿ ಓಂ ಶಾಂತಿ! ಎಂದು ಪತ್ರದಲ್ಲಿ ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.
ಅಕ್ಟೋಬರ್ 23 ರಂದು ಬರೆದಿರುವ ಪತ್ರ ಸುದೀಪ್ ಕೈ ಸೇರಿದ್ದು ಇಂದು ಈ ಪತ್ರವನ್ನು ಕಿಚ್ಚ ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಧನ್ಯವಾದ ತಿಳಿಸಿದ್ದಾರೆ. ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ನಿಮ್ಮ ಸಹಾನುಭೂತಿಯ ಸಂತಾಪ ಪತ್ರಕ್ಕಾಗಿ ಪ್ರಾಮಾಣಿಕ ಧನ್ಯವಾದಗಳು. ನಿಮ್ಮ ಚಿಂತನಶೀಲ ಮಾತುಗಳು ಈ ಆಳವಾದ ಕಷ್ಟದ ಸಮಯದಲ್ಲಿ ಸಾಂತ್ವಾನದ ಮೂಲಸೆಲೆಯನ್ನು ನೀಡಿದೆ.ನಿಮ್ಮ ಸಾಂತ್ವಾನವು ನನ್ನ ಹೃದಯ ತಟ್ಟಿದೆ.ನಿಮ್ಮ ವಿಶ್ವಾಸಕ್ಕೆ ನಾನು ಅಭಾರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.