Wednesday, October 15, 2025

ಪ್ರಧಾನಿ ಮೋದಿ ಮನೆ ರೋಡ್‌ ಹತ್ರನೂ ರಸ್ತೆಗುಂಡಿ ಇದೆ: ಡಿಕೆಶಿ ಕೌಂಟರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೆಹಲಿಯಲ್ಲಿರುವ ಪ್ರಧಾನಿ ಮೋದಿಯವರ ನಿವಾಸದ ರಸ್ತೆಯಲ್ಲೂ ಗುಂಡಿಗಳಿವೆ. ಇಡೀ ದೇಶದಲ್ಲಿ ಇದೇ ಸ್ಥಿತಿ ಇದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಸರಿಯಾದ ರಸ್ತೆ ಮಾಡಿದರೆ ಇವತ್ತು ಈ ರೀತಿಯ ಪರಿಸ್ಥಿತಿ ಬರುತ್ತಿಲಿಲ್ಲ. ಗುಂಡಿಗಳನ್ನು ಯಾರಾದ್ರೂ ಜನ ಮಾಡ್ತಾರಾ? ಪ್ರಕೃತಿಯಿಂದ ಆಗುವ ಸಮಸ್ಯೆ ಅದು. ನಾವು ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಿಸುತ್ತಿದ್ದೇವೆ. 

ನಮ್ಮ ಜಿಬಿಎ ಅಧಿಕಾರಿಗಳು ಪ್ರತಿನಿತ್ಯ 1,000 ಗುಂಡಿಗಳನ್ನ ಮುಚ್ಚುತ್ತಿದ್ದಾರೆ. ಅವ್ರು ನಾವು ಅದಷ್ಟು ಬೇಗ ಗುಂಡಿಗಳಿಂದ ಮುಕ್ತ ಬೆಂಗಳೂರು ಮಾಡುತ್ತೇವೆ ಅಂತಿದ್ದಾರೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.

error: Content is protected !!