ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ಅವರು ಇಂದು ದೆಹಲಿಯಲ್ಲಿ 32ನೇ ಅಂತರರಾಷ್ಟ್ರೀಯ ಕೃಷಿ ಅರ್ಥಶಾಸ್ತ್ರಜ್ಞರ ಸಮ್ಮೇಳನವನ್ನು ಉದ್ಘಾಟಿಸಿದರು.
ಆಗಸ್ಟ್ 2 ರಿಂದ 7ವರೆಗೆ ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಅಗ್ರಿಕಲ್ಚರಲ್ ಎಕನಾಮಿಸ್ಟ್ಸ್ ತ್ರೈವಾರ್ಷಿಕ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 65 ವರ್ಷಗಳ ನಂತರ ಭಾರತದಲ್ಲಿ ಇಂತಹ ಸಮಾವೇಶವನ್ನು ಆಯೋಜಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ನೀವೆಲ್ಲರೂ ವಿಶ್ವದ ವಿವಿಧ ದೇಶಗಳಿಂದ ಬಂದಿದ್ದೀರಿ. 120 ಮಿಲಿಯನ್ ರೈತರ ಪರವಾಗಿ ನಾನು ನಿಮ್ಮನ್ನು ಸ್ವಾಗತಿಸುತ್ತೇನೆ. ಭಾರತದ 30 ದಶಲಕ್ಷಕ್ಕೂ ಹೆಚ್ಚು ಮಹಿಳಾ ರೈತರು ಹಾಗೂ ದೇಶದ 30 ದಶಲಕ್ಷ ಮೀನುಗಾರರ ಪರವಾಗಿ 550 ದಶಲಕ್ಷ ಪ್ರಾಣಿಗಳು ವಾಸಿಸುವ ಹಾಗೂ ಈ ಕೃಷಿ ಪ್ರಧಾನ ಮತ್ತು ಪ್ರಾಣಿಗಳನ್ನು ಪ್ರೀತಿಸುವ ಈ ದೇಶಕ್ಕೆ ಸ್ವಾಗತ ಎಂದು ಹೇಳಿದರು.