ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಆಗ್ರಾ ಮೆಟ್ರೋ ಕಾರಿಡಾರ್ (Agra Metro Corridor) ಉದ್ಘಾಟನೆ ಮಾಡಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಮತ್ತು ಇತರ ನಾಯಕರು ತಾಜ್ ಮಹಲ್ ನಿಲ್ದಾಣದಿಂದ ಆಗ್ರಾದ ತಾಜ್ ಮಹಲ್ ಈಸ್ಟ್ ಸ್ಟೇಷನ್‌ಗೆ ಉದ್ಘಾಟನಾ ರೈಲು ಸವಾರಿ ಮಾಡಿದ್ದಾರೆ. ಈ ಮೂಲಕ ತಾಜ್ ಮಹಲ್‌ಗೆ ಈಗ ಮೆಟ್ರೋ ಸವಾರಿ ಮಾಡಬಹುದಾಗಿದೆ.
6 ಕಿಮೀ ಕಾರಿಡಾರ್‌ನಲ್ಲಿ ಮೆಟ್ರೋ ಸೇವೆ ಗುರುವಾರದಿಂದ ಪ್ರಯಾಣಿಕರಿಗೆ ಲಭ್ಯವಿದೆ. ತಾಜ್ ಮಹಲ್ ಪೂರ್ವ ನಿಲ್ದಾಣ, ಕ್ಯಾಪ್ಟನ್ ಶುಭಂ ಗುಪ್ತಾ ನಿಲ್ದಾಣ, ಫತೇಹಾಬಾದ್ ರಸ್ತೆ ನಿಲ್ದಾಣ, ತಾಜ್ ಮಹಲ್ ನಿಲ್ದಾಣ ಮತ್ತು ಮಂಕಮೇಶ್ವರ ದೇವಸ್ಥಾನ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ತಾಜ್ ಮಹಲ್ ನಿಲ್ದಾಣದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಆಗ್ರಾ ಮೆಟ್ರೋವು ಸ್ಥಳೀಯರು ಮತ್ತು ನಗರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ವಿಶ್ವದರ್ಜೆಯ ಸಾರ್ವಜನಿಕ ಸಾರಿಗೆ ಸೌಲಭ್ಯ ಒದಗಿಸುತ್ತದೆ. ಆಗ್ರಾ ಮೆಟ್ರೋವನ್ನು ಆಧುನಿಕ ಸೌಲಭ್ಯಗಳ ಕೇಂದ್ರವನ್ನಾಗಿ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ.