ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಇಂದು ನವದೆಹಲಿಯಲ್ಲಿ ಹೊಸ ಸಂಸತ್ ಭವನವನ್ನು ಉದ್ಘಾಟಿಸಿದರು ಮತ್ತು ಅದನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ಇಂದು ಹೋಮ ಹವನ ಪೂಜೆಯೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೂಡ ಪ್ರಧಾನಿಯವರೊಂದಿಗೆ ಇದ್ದರು. ಪೂಜೆಯ ನಂತರ ಪ್ರಧಾನಿ ಮತ್ತು ಲೋಕಸಭಾ ಸ್ಪೀಕರ್ ಬಿರ್ಲಾ ಹೊಸ ಲೋಕಸಭೆಗೆ ಪ್ರವೇಶಿಸಿದರು. ಅಲ್ಲಿ ಸ್ಪೀಕರ್ ಕುರ್ಚಿಯ ಬಳಿ ಐತಿಹಾಸಿಕ ರಾಜದಂಡ ‘ಸೆಂಗೋಲ್’ ಅನ್ನು ಪ್ರತಿಷ್ಠಾಪಿಸಿದರು.
ಅದಾದ ಬಳಿಕ ಕಟ್ಟಡ ಕಟ್ಟಿದಂತ ಕಾರ್ಮಿಕರನ್ನು ಮೋದಿಯವರು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ನಂತರ ಪ್ರಧಾನಮಂತ್ರಿಯವರು ಹೊಸ ಸಂಸತ್ ಭವನದ ಉದ್ಘಾಟನೆಯ ಸಂಕೇತವಾಗಿ ನಾಮಫಲಕವನ್ನು ಅನಾವರಣಗೊಳಿಸಿದರು. ಬಳಿಕ ವಿವಿಧ ಧರ್ಮದ ಮುಖಂಡರು ಪ್ರಾರ್ಥನೆ ಸಲ್ಲಿಸುವ ಮೂಲಕ ಸೌಹಾರ್ದತೆಯ ಸಂದೇಶವನ್ನು ಸಾರಿದರು.