ಕೊಟ್ಟ ಮಾತು ಉಳಿಸಿಕೊಂಡ ಪ್ರಧಾನಿ ಮೋದಿ: ಬಾಗಲಕೋಟೆ ಬಾಲಕಿಗೆ ಬಂತು ಪತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಏಪ್ರಿಲ್ 29 ರಂದು ಲೋಕಸಭಾ ಚುನಾವಣೆ ಹಿನ್ನೆಲೆ ಬಾಗಲಕೋಟೆ (Bagalkote) ಆಗಮಿಸಿದ್ದಾಗ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ತಾಯಿಯ ಸ್ಕೆಚ್ ನೀಡಿದ್ದ ಬಾಗಲಕೋಟೆಯ ಯುವತಿ ನಾಗರತ್ನ ಮೇಟಿಗೆ ಕೊಟ್ಟ ಮಾತಿನಂತೆ ಮೋದಿ ಪತ್ರ ಬರೆದಿದ್ದಾರೆ.

ಬಾಗಲಕೋಟೆ ಆಗಮಿಸಿದ್ದಾಗ ಯುವತಿಯ ಸ್ಕೆಚ್ ಪ್ರಧಾನಿ ಮೋದಿ ಗಮನ ಸೆಳೆದಿತ್ತು. ತಾನು ಚಿತ್ರಿಸಿದ ಸ್ಕೆಚ್ ಹಿಡಿದು ಯುವತಿ ವೇದಿಕೆ ಮುಂಭಾಗದಲ್ಲಿ ನಿಂತಿದ್ದಳು. ತಾಯಿಯ ಫೋಟೋ ಫ್ರೆಮ್ ನೋಡಿ ಎಸ್​ಪಿಜಿ ಸಿಬ್ಬಂದಿಗೆ ಹೇಳಿ ಮೋದಿ ತರಿಸಿಕೊಂಡಿದ್ದರು.ಅದರಲ್ಲಿ ನಿನ್ನ ಹೆಸರು ವಿಳಾಸ ಬರದು ಕೊಡು ನಾನು ಪತ್ರ ಕಳಿಸುತ್ತೇನೆ ಎಂದು ಮೋದಿ ಹೇಳಿದ್ದರು.

ಅದೇ ರೀತಿಯಾಗಿ ಯುವತಿಗೆ ಕೊಟ್ಟ ಮಾತಿನಂತೆ ಮೇ 5 ರಂದು ಪತ್ರ ಬರೆದಿದ್ದು, ಪೋಸ್ಟ್ ಮೂಲಕ ಯುವತಿಗೆ ಪತ್ರ ಬಂದು ತಲುಪಿದೆ.

ಸುಂದರವಾದ ಭಾವಚಿತ್ರ ಉಡುಗೊರೆಯಾಗಿ ನೀಡಿದಕ್ಕೆ ನಾನು ನಿಮಗೆ ಧನ್ಯವಾದ ತಿಳಿಸುತ್ತೇನೆ. ಈ ಕಲಾತ್ಮಕ ಕೆಲಸವು ಮಾನವ ಭಾವನೆಗಳ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ನಿಮ್ಮ ವರ್ಣಚಿತ್ರ ರೋಮಾಂಚಕ ಪ್ರದರ್ಶನವು ಯುವಶಕ್ತಿಯ ಸಾರವನ್ನು ಒಳಗೊಂಡಿರುತ್ತದೆ. ಹೊಸ ಭಾರತವನ್ನು ರೂಪಿಸುವ ಮತ್ತು ನಮ್ಮ ಯುವಕರಿಗೆ ಭರವಸೆಯ ಭವಿಷ್ಯವನ್ನು ಭದ್ರಪಡಿಸುವ ನನ್ನ ಬದ್ಧತೆಯನ್ನು ಪ್ರೇರೇಪಿಸುತ್ತದೆ.ನಿಮ್ಮ ಸೃಜನಶೀಲ ಪ್ರತಿಭೆ ಮತ್ತು ಕೌಶಲ್ಯಗಳನ್ನು ನಿಮ್ಮ ಕೆಲಸಕ್ಕೆ ಅನ್ವಯಿಸುವಲ್ಲಿ ನೀವು ನಿರಂತರವಾಗಿರಿ. ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಕೆಗಳೊಂದಿಗೆ. ಇಂತಿ, ನಿಮ್ಮ ನರೇಂದ್ರ ಮೋದಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!