ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿಯವರು ಕನ್ಯಾಕುಮಾರಿಗೆ (Kanniyakumari) ಬಂದಿಳಿದಿದ್ದಾರೆ.
ಇಂದು ಸಂಜೆಯಿಂದ ಜೂನ್ 1 ರ ಸಂಜೆಯವರೆಗೆ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿಯೇ ಧ್ಯಾನ ಮಂಟಪದಲ್ಲಿ ಪ್ರಧಾನಿಯವರು ಹಗಲು-ರಾತ್ರಿ ಧ್ಯಾನ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಹೆಲಿಕಾಪ್ಟರ್ ಮೂಲಕ ಕನ್ಯಾಕುಮಾರಿಗೆ ಮೋದಿ ಆಮಿಸಿದ್ದಾರೆ.
ಈಗಾಗಲೇ ತಿರುನಲ್ವೇಲಿ ಡಿಐಜಿಗೆ ಭದ್ರತೆಯ ಉಸ್ತುವಾರಿ ನೀಡಲಾಗಿದೆ. ಈ ಸ್ಥಳದ ಭದ್ರತೆಗೆ 2000 ಪೊಲೀಸರನ್ನು ನಿಯೋಜಿಸಲಾಗಿದೆ.