ಹೊಸದಿಗಂತ ಡಿಜಿಟಲ್ ಡೆಸ್ಕ್:
ಥೈಲ್ಯಾಂಡ್ ಪ್ರವಾಸ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾದ ಕೊಲಂಬೊಗೆ ಆಗಮಿಸಿದ್ದಾರೆ.
ಮಳೆಯ ನಡುವೆಯೂ ಶ್ರೀಲಂಕಾದ 6 ಉನ್ನತ ಸಚಿವರು ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ವಿಶೇಷವಾಗಿ ಸ್ವಾಗತಿಸಿದರು.
ಸಾಂಪ್ರದಾಯಿಕವಾಗಿ ಸಿದ್ಧವಾಗಿದ್ದ ಕಲಾವಿದರು ಮೋದಿಗೆ ಆತ್ಮೀಯ ಸ್ವಾಗತ ಕೋರಿದರು. ಶ್ರೀಲಂಕಾದ ಸಚಿವರಾದ ವಿಜಿತಾ ಹೆರಾತ್, ನಲಿಂದಾ ಜಯತಿಸ್ಸ, ಅನಿಲ್ ಜಯಂತ, ರಾಮಲಿಂಗಂ ಚಂದ್ರಶೇಖರ್, ಸರೋಜಾ ಸಾವಿತ್ರಿ ಪೌಲ್‌ರಾಜ್ ಮತ್ತು ಕ್ರಿಶಾಂತ ಅಬೇಸೇನ ಪ್ರಧಾನಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.