April 4, 2026
Saturday, April 4, 2026
spot_img

ಪ್ರಧಾನಿ ಮೋದಿಯಿಂದ ಗರ್ಭಕಂಠ ಕ್ಯಾನ್ಸರ್​ ರೋಗ ತಡೆಯುವ HPV ಲಸಿಕೆ ಅಭಿಯಾನಕ್ಕೆ ಚಾಲನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗರ್ಭಕಂಠ ಕ್ಯಾನ್ಸರ್​ ರೋಗವನ್ನು ತಡೆಯುವ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದರು.

ರಾಜಸ್ತಾನದ ಅಜ್ಮೀರ್​​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವು ಬಾಲಕಿಯರಿಗೆ ಲಸಿಕೆ ಹಾಕುವ ಮೂಲಕ ರಾಷ್ಟ್ರವ್ಯಾಪಿ ನಡೆಸಲಾಗುವ ಅಭಿಯಾನಕ್ಕೆ ಔಪಚಾರಿಕವಾಗಿ ಉದ್ಘಾಟಿಸಿದರು.ಈ ಲಸಿಕೆಯನ್ನು ಕೇಂದ್ರ ಸರ್ಕಾರ ಉಚಿತವಾಗಿ ನೀಡಲಿದೆ.

ಅಧಿಕಾರಿಗಳ ಪ್ರಕಾರ, 9 ರಿಂದ 14 ವರ್ಷದೊಳಗಿನ ಬಾಲಕಿಯರಿಗೆ ‘ಗಾರ್ಡಸಿಲ್ 4’ ಲಸಿಕೆಯ ಒಂದು ಡೋಸ್ ಅಭಿಯಾನದಲ್ಲಿ ನೀಡಲಾಗುವುದು. ಇದು, ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುವ ಟೈಪ್​ 16 ಮತ್ತು 18 ಹಾಗೂ ಟೈಪ್ 6 ಮತ್ತು 11 ರ ವಿರುದ್ಧ ಇದು ಹೋರಾಡಲಿದೆ.

14 ವರ್ಷದೊಳಗಿನ ಎಲ್ಲಾ ಬಾಲಕಿಯರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಜಿಲ್ಲಾ, ತಾಲೂಕು ಆಸ್ಪತ್ರೆಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು ಸೇರಿದಂತೆ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ‘ಗಾರ್ಡಸಿಲ್ 4’ ಲಸಿಕೆಯ ಒಂದೇ ಡೋಸ್ ನೀಡಲು ಸೂಚಿಸಿದೆ.

ದೇಶದಲ್ಲಿ ಹದಿಹರೆಯದ ಹುಡುಗಿಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಎರಡನೇ ಅತ್ಯಂತ ಮಾರಕ ಸಹಜ ಕ್ಯಾನ್ಸರ್ ಆಗಿದೆ. ವಾರ್ಷಿಕವಾಗಿ ಸುಮಾರು 80 ಸಾವಿರ ಪ್ರಕರಣಗಳು, 42 ಸಾವಿರಕ್ಕೂ ಹೆಚ್ಚು ಸಾವುಗಳು ಇದರಿಂದ ವರದಿಯಾಗುತ್ತಿವೆ. ಗರ್ಭಕಂಠದ ಕ್ಯಾನ್ಸರ್‌ನ ಬಹುತೇಕ ಪ್ರಕರಣಗಳಲ್ಲಿ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಎಂಬ ಸೋಂಕಿನಿಂದ ಉಂಟಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !