ಹೊಸದಿಗಂತ ಡಿಜಿಟಲ್ ಡೆಸ್ಕ್;
ಸಂಸತ್ತಿನ ಸಂಕೀರ್ಣದಲ್ಲಿ ಇಂದು ಅನಧಿಕೃತ ಚಹಾ ಸಭೆ ನಡವೆಯಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಪರಸ್ಪರ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
ಬಜೆಟ್ ಅಧಿವೇಶನದ ನಿಗದಿತ ಅಂತ್ಯಕ್ಕೆ ಒಂದು ದಿನ ಮೊದಲು ಈ ಸಭೆ ನಡೆದಿದೆ. ಸಂಸತ್ತಿನ ಪ್ರಸ್ತುತ ಅಧಿವೇಶನವು ಆಗಸ್ಟ್ 12 ರಂದು ಕೊನೆಗೊಳ್ಳಬೇಕಿತ್ತು ಆದರೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು (ಅನಿರ್ದಿಷ್ಟ ಅವಧಿಗೆ) ಮುಂದೂಡಿದರು.
ಸಭೆಯಲ್ಲಿ ನಾಯಕರು ನಮಸ್ತೆ ಎಂದು ಹೇಳಿ ಪರಸ್ಪರ ಶುಭಾಶಯ ಕೋರಿ, ನಗುತ್ತಾ ಸ್ವೀಕರಿಸಿದ್ದಾರೆ. ಪ್ರಧಾನಿಯವರು ಸೋಫಾದಲ್ಲಿ ಆಸೀನರಾಗಿದ್ದು ಅವರ ಪಕ್ಕದಲ್ಲಿ ಸ್ಪೀಕರ್ ಓಂ ಬಿರ್ಲಾ ಇದ್ದರು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಯವರ ಬಲಭಾಗದ ಕುರ್ಚಿಯಲ್ಲಿದ್ದರು.
ಸಚಿವರಾದ ಕಿರಣ್ ರಿಜಿಜು, ಕಿಂಜರಾಪು ರಾಮಮೋಹನ್ ನಾಯ್ಡು, ಚಿರಾಗ್ ಪಾಸ್ವಾನ್, ಪಿಯೂಷ್ ಗೋಯಲ್ ಮತ್ತು ವಿರೋಧ ಪಕ್ಷದ ಸಂಸದರಾದ ಸುದೀಪ್ ಬಂಡೋಪಾಧ್ಯಾಯ, ಕನಿಮೋಳಿ ಮೊದಲಾದವ ರಾಹುಲ್ ಗಾಂಧಿಯವರ ಸಾಲಿನಲ್ಲಿ ಕುಳಿತಿದ್ದರು. ಪ್ರತಿಪಕ್ಷ ನಾಯಕನ ಇನ್ನೊಂದು ಬದಿಯಲ್ಲಿ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಕುಳಿತಿದ್ದರು.