ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬ್ರೆಜಿಲ್ ರಾಜಧಾನಿ ಬ್ರೆಸಿಲಿಯಾಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಬ್ರೆಜಿಲ್ ಅಧ್ಯಕ್ಷರ ಅಧಿಕೃತ ನಿವಾಸವಾದ ಅಲ್ವೊರಾಡಾ ಅರಮನೆಯಲ್ಲಿ ಭವ್ಯ ಸ್ವಾಗತ ನೀಡಲಾಯಿತು.
ಬ್ರೆಜಿಲ್ ರಾಜಧಾನಿ ಬ್ರೆಸಿಲಿಯಾಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು 114 ಕುದುರೆಗಳನ್ನು ಒಳಗೊಂಡ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು. ಇದು ವಿರಳವಾಗಿ ನೀಡಲಾಗುವ ಗೌರವವಾಗಿದೆ. ಇದು ಬ್ರೆಜಿಲ್‌ಗೆ ಭೇಟಿ ನೀಡುವ ಬೇರೆ ದೇಶದ ನಾಯಕನ ಬಗ್ಗೆ ಹೊಂದಿರುವ ಮೆಚ್ಚುಗೆಯ ಸಂಕೇತವಾಗಿದೆ.
ಬ್ರೆಜಿಲ್‌ನ ರಕ್ಷಣಾ ಸಚಿವ ಜೋಸ್ ಮ್ಯೂಸಿಯೊ ಮಾಂಟೆರೊ ಫಿಲ್ಹೋ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಸಾಂಪ್ರದಾಯಿಕ ಬ್ರೆಜಿಲಿಯನ್ ಸಾಂಬಾ ರೆಗ್ಗೇ ಪ್ರದರ್ಶನ ನೀಡಿದ ಕಲಾವಿದರನ್ನು ಮೋದಿ ಶ್ಲಾಘಿಸಿದರು.
ಜುಲೈ 6ರಿಂದ 7ರವರೆಗೆ ರಿಯೊ ಡಿ ಜನೈರೊದಲ್ಲಿ ನಡೆದ 17ನೇ ಬ್ರಿಕ್ಸ್ ಶೃಂಗಸಭೆಯ ನಂತರ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಬ್ರೆಜಿಲ್‌ಗೆ ಭೇಟಿ ನೀಡಿದ್ದಾರೆ. ಅವರ ಭೇಟಿಯು ಬ್ರಿಕ್ಸ್ ಚೌಕಟ್ಟಿನ ಅಡಿಯಲ್ಲಿ ಭಾರತ-ಬ್ರೆಜಿಲ್ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ.