ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಅಮೆರಿಕ ಪ್ರವಾಸದ ವೇಳೆ ಶ್ವೇತಭವನಕ್ಕೆ (Whitehouse) ಭೇಟಿ ಕೊಟ್ಟ ಸಂದರ್ಭದಲ್ಲಿ ಅವರಿಗೆ ವಿಶೇಷವಾಗಿ ಸ್ವಾಗತ ಸಿಕ್ಕಿದೆ .
ಅದ್ರಲ್ಲೂ ಬಾಲಿವುಡ್ ನಟ ಶಾರುಖ್ ಖಾನ್ ಅಭಿಯನದ ಚೈಯ್ಯಾ ಚೈಯ್ಯಾ ಹಾಡಿನಿಂದ ಸ್ವಾಗತ ಕೋರಿದ್ದಾರೆ.
ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಹೆಸರಾಂತ ಕ್ಯಾಪೆಲ್ಲಾ ಗ್ರೂಪ್, ಪೆನ್ ಮಸಾಲಾ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಗಮನದ ಮೊದಲು ಶ್ವೇತಭವನದಲ್ಲಿ ಈ ಹಾಡನ್ನು ಹಾಡಿದರು. ದಕ್ಷಿಣ ಏಷ್ಯಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಒಳಗೊಂಡ ಗುಂಪು, ಮೋದಿಯವರಿಗೆ ವಿದ್ಯುಕ್ತ ಸ್ವಾಗತವನ್ನು ಕೋರಲು ಈ ಹಾಡನ್ನು ಆಯ್ದುಕೊಂಡಿದ್ದರು. ಶಾರುಖ್ ಖಾನ್ ಅಭಿನಯದ 1998 ರ ಚಿತ್ರ ‘ದಿಲ್ ಸೇ…’ ಚಿತ್ರದ ‘ಚೈಯ್ಯಾ ಚೈಯಾ’ ಹಾಡು ಅಮೆರಿಕದಲ್ಲಿ ಮೊಳಗಿತು. ಇದರ ಜೊತೆಗೆ ಇನ್ನೂ ಕೆಲವು ಬಾಲಿವುಡ್ ಹಾಡುಗಳನ್ನು ಅವರು ಹಾಡಿ ರಂಜಿಸಿದರು.
ಈ ವಿಷಯ ತಿಳಿದು ಇದೀಗ ನಟ ಶಾರುಖ್ ಖಾನ್ ಖುಷಿಪಟ್ಟಿದ್ದಾರೆ. ತಾವೂ ಆ ಸಂದರ್ಭದಲ್ಲಿ ಅಲ್ಲಿ ಇರಬೇಕಿತ್ತು ಎಂಬ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.
ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕಿಸಲು ಆಸ್ಕ್ ಮಿ ಅನಿಥಿಂಗ್ (Ask me anything) ಎಂಬ ಸೆಷನ್ ಅನ್ನು ಟ್ವಿಟರ್ನಲ್ಲಿ ಕೆಲ ಪ್ರಾರಂಭಿಸಿದ್ದಾರೆ.
ಆ ಸೆಷನ್‌ನಲ್ಲಿ ನಟ ಅಮೆರಿಕದ ಕುರಿತು ಪ್ರಸ್ತಾಪಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್‌ನಲ್ಲಿ, ಎಸ್‌ಆರ್‌ಕೆ ಅವರ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಶಾರುಖ್ (Shahrukh Khan) ಉತ್ತರಿಸಿದರು. ‘ಸರ್ ಚೈಯಾ ಚೈಯ್ಯಾ ಹಾಡಿನ ಮೂಲಕ ಅಮೆರಿಕದಲ್ಲಿ ಮೋದಿಜಿಯನ್ನು ಸ್ವಾಗತಿಸಲಾಯಿತು. ನೀವು ಏನು ಹೇಳಲು ಬಯಸುತ್ತೀರಿ. ಈ ಬಗ್ಗೆ?’ ಎಂದು ಕೇಳಿದಾಗ ಶಾರುಖ್ ಖಾನ್, ‘ನಾನೂ ಅಲ್ಲಿ ಇರಬೇಕಿತ್ತು ಎನಿಸುತ್ತಿದೆ. ಅಲ್ಲಿದ್ದರೆ ನಾನು ಆ ಹಾಡಿಗೆ ನೃತ್ಯ ಮಾಡುತ್ತಿದ್ದೆ. ಆದರೆ ಏನು ಮಾಡುವುದು.. ಚೈಯಾ ಚೈಯಾ ಡಾನ್ಸ್ ಮಾಡಲು ರೈಲನ್ನು ಒಳಗೆ ಬಿಡುತ್ತಿರಲಿಲ್ಲಾ ಅನ್ನಿಸುತ್ತದೆ’ ಎಂದು ತಮಾಷೆ ಮಾಡಿದ್ದಾರೆ. ಇದನ್ನು ಕೇಳಿದ ಫ್ಯಾನ್ಸ್ ನಗೆಗಡಲಿನಲ್ಲಿ ತೇಲುತ್ತಿದ್ದಾರೆ.