ಶ್ರೀಹರಿಹರ ದೇಸಿಕಾ ಸ್ವಾಮಿಗಳಿಂದ ಪವಿತ್ರ ‘ಸೆಂಗೋಲ್’ ಸ್ವೀಕರಿಸಿದ ಪ್ರಧಾನಿ ಮೋದಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ಮಧುರೈನ 293ನೇ ಪ್ರಧಾನ ಅರ್ಚಕ ಶ್ರೀಹರಿಹರ ದೇಸಿಕಾ ಸ್ವಾಮಿಗಳಿಂದ ಪವಿತ್ರ ‘ಸೆಂಗೋಲ್’ ಸ್ವೀಕರಿಸಿದರು. ಈ ಸೆಂಗೋಲ್ ಬ್ರಿಟಿಷರು ಮತ್ತು ಭಾರತದ ನಡುವಿನ ಅಧಿಕಾರ ವರ್ಗಾವಣೆಯ ಮಹತ್ವದ ಐತಿಹಾಸಿಕ ಸಂಕೇತವಾಗಿದೆ.

ಇನ್ನು ಇದನ್ನ ಬ್ರಿಟಿಷರು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಹಸ್ತಾಂತರಿಸಿದ್ದರು.

ವೈದಿಕ ಪಠಣದೊಂದಿಗೆ ಅಧಿಕಾರದ ವರ್ಗಾವಣೆಯ ಈ ಸಾಂಸ್ಕೃತಿಕ ಪರಂಪರೆಯನ್ನ ಅಧೀನಮ್ ಒಪ್ಪಿಸಿದರು. ಈ ಸಂಪ್ರದಾಯದ ಸಮಯದಲ್ಲಿ, 21 ಅಧ್ಯಾನಮರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು, ಪ್ರಧಾನಿಯವರಿಗೆ ಚಿನ್ನದ ಅಂಗವಸ್ತ್ರ ಹಾಕಲಾಯ್ತು ಮತ್ತು ನಂತರ ಅವರು ವೈದಿಕ ವಿಧಿಗಳ ಪ್ರಕಾರ ಅಧಾನಮ್’ರಿಂದ ಸೆಂಗೋಲ್ ಪಡೆದರು. ಈ ಸಂದರ್ಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!