ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದ ಕಾಂಗ್ರಾಕ್ಕೆ ವಿಧಾನಸಭಾ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಹೊರಟಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಾವಲು ಪಡೆಯನ್ನು ತಡೆದು ಅಂಬುಲೆನ್ಸ್‌ಗೆ ಹೋಗಲು ದಾರಿ ಮಾಡಿಕೊಟ್ಟಿದ್ದಾರೆ.
ಕಾಂಗ್ರಾಕ್ಕೆ ಸಂಚರಿಸುತ್ತಿದ್ದ ವೇಳೆ ದಾರಿಯಲ್ಲಿ ಅಂಬುಲೆನ್ಸ್ ಬಂದಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಬೆಂಗಾವಲು ಪಡೆ ಅಂಬುಲೆನ್ಸ್‌ಗೆ ದಾರಿ ಬಿಟ್ಟಿದೆ. ಅಂಬುಲೆನ್ಸ್ ಹೋದ ನಂತರ ಮೋದಿ ಬೆಂಗಾವಲು ಪಡೆ ಚುನಾವಣಾ ಪ್ರಚಾರಕ್ಕೆ ತೆರಳಿದೆ.
ಈ ಹಿಂದೆ ಗುಜರಾತ್ ಭೇಟಿಯ ವೇಳೆ ಅಂಬುಲೆನ್ಸ್ ಗೆ ಅವಕಾಶ ಮಾಡಿಕೊಡಲು ಪ್ರಧಾನಿ ಮೋದಿ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿದ್ದರು.
#WATCH | Prime Minister Narendra Modi stopped his convoy to let an Ambulance pass in Chambi, Himachal Pradesh pic.twitter.com/xn3OGnAOMT
— ANI (@ANI) November 9, 2022