ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುರೋಪ್ ಒಕ್ಕೂಟದ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದಾರೆ.
ಉಕ್ರೇನ್‌ನ ಮಾನವೀಯ ಬಿಕ್ಕಟ್ಟಿಗೆ ಪ್ರಧಾನಿ ಮೋದಿ ಬೇಸರ ವ್ಯಕ್ತಪಡಿಸಿದ್ದು, ಎರಡೂ ದೇಶಗಳ ನಡುವಣ ಮಾತುಕತೆಯನ್ನು ಅವರು ಸ್ವಾಗತಿಸಿದ್ದಾರೆ.
ಯುದ್ಧವನ್ನು ನಿಲ್ಲಿಸುವುದು ಮತ್ತು ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವ ಕುರಿತಾಗಿ ಭಾರತ ಈಗಾಗಲೇ ವ್ಯಕ್ತಪಡಿಸಿರುವ ನಿಲುವನ್ನು ಪುನರುಚ್ಛರಿಸಿದ್ದಾರೆ. ಎಲ್ಲರಿಗೂ ತಡೆರಹಿತ ಮತ್ತು ಸುಗಮ ಸಂಚಾರ ಖಾತ್ರಿಪಡಿಸಬೇಕಾದ ಅಗತ್ಯ ಇದೆ ಎಂದಿದ್ದಾರೆ.
ಔಷಧಗಳು ಹಾಗೂ ಅಗತ್ಯ ವಸ್ತುಗಳ ಮಾನವೀಯ ನೆರವನ್ನು ಉಕ್ರೇನ್‌ಗೆ ನೀಡಲು ಭಾರತ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ವಿವರಿಸಿದ್ದಾರೆ.