February 16, 2026
Monday, February 16, 2026
spot_img

ಫೆಬ್ರವರಿ 25 ರಿಂದ ಪ್ರಧಾನಿ ಮೋದಿ ಎರಡು ದಿನಗಳ ಇಸ್ರೇಲ್​ಗೆ ಪ್ರವಾಸ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫೆಬ್ರವರಿ 25 ರಿಂದ 26 ರವರೆಗೆ ಎರಡು ದಿನಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ಗೆ ಪ್ರಯಾಣಿಸಲಿದ್ದಾರೆ.

ಅಮೇರಿಕನ್ ಯಹೂದಿ ಸಂಘಟನೆಗಳ ಅಧ್ಯಕ್ಷರ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಮುಂದಿನ ವಾರ ಇಲ್ಲಿಗೆ ಭಾರತದಿಂದ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ .

ಇಸ್ರೇಲ್ ಮತ್ತು ಭಾರತದ ನಡುವೆ ಅಗಾಧ ಮಿತೃತ್ವ ಇದೆ. ನಿಮಗೆ ತಿಳಿದಂತೆ ಭಾರತವು ಒಂದು ಸಣ್ಣ ದೇಶವಲ್ಲ. ಇದು 1.4 ಬಿಲಿಯನ್ ಜನರನ್ನು ಹೊಂದಿದೆ. ಭಾರತವು ಅತ್ಯಂತ ಶಕ್ತಿಶಾಲಿ ಅತ್ಯಂತ ಜನಪ್ರಿಯವಾಗಿದೆ ಎಂದು ನೆತನ್ಯಾಹು ತಮ್ಮ ಭಾಷಣದಲ್ಲಿ ಬಣ್ಣಿಸಿದ್ದರು.

ಈ ಭೇಟಿ ವೇಳೆ ಪ್ರಧಾನಿ ಮೋದಿ ಇಸ್ರೇಲಿ ನೆಸ್ಸೆಟ್ (ಸಂಸತ್ತು) ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.

ಮೋದಿ ತಮ್ಮ ಎರಡು ದಿನಗಳ ಭೇಟಿಯ ಸಮಯದಲ್ಲಿ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಹಿತಾಸಕ್ತಿಯ ವಿಷಯಗಳನ್ನು ಪ್ರಸ್ತಾಪಿಸುವ ನಿರೀಕ್ಷೆಯಿದೆ. ಇದು ಅವರ ಎರಡನೇ ಇಸ್ರೇಲ್ ಭೇಟಿಯಾಗಲಿದೆ. ಜುಲೈ 2017 ರಲ್ಲಿ ಮೊದಲ ಬಾರಿಗೆ ಪ್ರಧಾನಿ ಇಸ್ರೇಲ್​ ಪ್ರವಾಸ ಕೈಗೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !