‘ಅಗ್ನಿತೀರ್ಥ’ದಲ್ಲಿ ಪವಿತ್ರಸ್ನಾನ ಮಾಡಿ ರಾಮನಾಥನ ದರುಶನ ಪಡೆದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ರಾಮೇಶ್ವರಂಗೆ ತೆರಳಿದ ಪ್ರಧಾನಿ ಮೋದಿ ಪವಿತ್ರ ಸಮುದ್ರ ಸ್ನಾನ ಮಾಡಿದ್ದಾರೆ. ಬಳಿಕ 22 ಬಾವಿಗಳ ಪವಿತ್ರ ನೀರಿನಿಂದ ಸ್ನಾನ ಮಾಡಿ ರಂಗನಾಥ ಸ್ವಾಮಿ ದರುಶನ ಪಡೆದಿದ್ದಾರೆ.

 

ರಾಮೇಶ್ವರಂದ ಅಗ್ನಿತೀರ್ಥ ಸಮುದ್ರದಲ್ಲಿ ಮೋದಿ ಪವಿತ್ರ ಸ್ನಾನ ಮಾಡಿದ್ದಾರೆ. ಸಮುದ್ರ ಸ್ನಾನ ಮಾಡಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ ಮೋದಿ, ಮಂದಿರದ ಆವರಣದಲ್ಲಿರುವ 22 ಬಾವಿಗಳ ಪವಿತ್ರ ನೀರಿನಿಂದ ಸ್ನಾನ ಮಾಡಿದ್ದಾರೆ. ಬಳಿಕ ರಂಗನಾಥ ಸ್ವಾಮಿ ಮಂದಿರ ಪ್ರವೇಶಿಸಿದ್ದಾರೆ.

ರಾಮೇಶ್ವರಂದಲ್ಲಿರುವ ರಂಗನಾಥ ಸ್ವಾಮಿ ದರುಶನದ ಬಳಿಕಮೋದಿ, ಭಜನೆ ಪಾಲ್ಗೊಂಡು ಭಕ್ತಿಯಿಂದ ಜಪ ಮಾಡಿದರು. ತಮಿಳುನಾಡಿನ ಅತ್ಯಂತ ಪುರಾತನ ಶಿವ ದೇವಾಲಯ ಇದಾಗಿದೆ. ರಂಗನಾಥ ಸ್ವಾಮಿ ದೇವಸ್ಥಾನಕ್ಕೂ ರಾಮಾಯಣಕ್ಕೂ ನೇರ ಸಂಬಂಧವಿದೆ. ರಂಗನಾಥ ಸ್ವಾಮಿ ದೇವಸ್ಥಾನದಲ್ಲಿರುವ ಶಿವಲಿಂಗವನ್ನು ಭಗವಾನ್ ಶ್ರೀರಾಮ ಹಾಗೂ ಸೀತಾದೇವಿ ಪ್ರತಿಷ್ಠಾಪಿಸಿರುವ ಐತಿಹ್ಯವಿದೆ. ಶ್ರೀರಾಮ ಹಾಗ ಸೀತಾದೇವಿ ಇದೇ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿರುವ ಕುರಿತು ವಾಲ್ಮೀಕಿ ರಾಮಾಯಣ ಮಾತ್ರವಲ್ಲ, ಹಲವು ಪುರಾಣದಲ್ಲಿ ಉಲ್ಲೇಖವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!