ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಫೋನ್ನಲ್ಲಿ ಮಾತನಾಡಿದ್ದಾರೆ. ‘Happy birthday Putin’ ಎಂದು ಶುಭಕೋರಿದ್ದಾರೆ.
ಪುಟಿನ್ ಜೊತೆಗಿನ ಮಾತುಕತೆಯ ಸಮಯದಲ್ಲಿ ಪ್ರಧಾನಿ ಮೋದಿ ರಷ್ಯಾದ ಅಧ್ಯಕ್ಷ ಪುಟಿನ್ ಅವರಿಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ನಿರಂತರ ಯಶಸ್ಸನ್ನು ಕೋರಿದರು.
ಈ ವೇಳೆ ಭಾರತ ಮತ್ತು ರಷ್ಯಾದ ನಡುವಿನ ಬಲವಾದ ದ್ವಿಪಕ್ಷೀಯ ಸಂಬಂಧವನ್ನು ಬೆಂಬಲಿಸುತ್ತಿರುವ ತಮ್ಮ ವೈಯಕ್ತಿಕ ಬಾಂಧವ್ಯ ಮತ್ತು ದೀರ್ಘಕಾಲದ ಸ್ನೇಹವನ್ನು ಪುನರುಚ್ಚರಿಸುವ ಮೂಲಕ ಇಬ್ಬರೂ ನಾಯಕರು ಆತ್ಮೀಯ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
‘Happy birthday Putin’ ಶುಭಕೋರಿದ ಪ್ರಧಾನಿ ಮೋದಿ
