May 5, 2026
Tuesday, May 5, 2026
spot_img

ಮಂಡ್ಯಕ್ಕೆ ಬರುವ ಪ್ರಧಾನಿ ಮೋದಿಗೆ ʼಮೈಸೂರು ಪೇಟʼ ಉಡುಗೊರೆ, ಇದರ ವಿಶೇಷತೆ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಕ್ಕರೆ ನಾಡು ಮಂಡ್ಯಕ್ಕೆ ನಾಳೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ.

ನಾಗಮಂಗಲ ತಾಲೂಕಿನ 1,800 ವರ್ಷಗಳ ಇತಿಹಾಸವೊಂದಿರುವ ಆದಿಚುಂಚನಗಿರಿ ಮಠಕ್ಕೆ ಏ.15 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದಾರೆ. ಇಲ್ಲಿ ನಿರ್ಮಾಣವಾಗಿರುವ 80 ಕೋಟಿ ರೂ.ಗಿಂತಲೂ ಅಧಿಕ ವೆಚ್ಚದ ಬಾಲಗಂಗಾಧರನಾಥ ಸ್ವಾಮೀಜಿ ಅವರ ಭೈರವೈಕ್ಯ ಮಂದಿರವನ್ನು ಅವರು ಉದ್ಘಾಟನೆ ಮಾಡಲಿದ್ದಾರೆ.

ಮೈಸೂರು ಪೇಟ ಉಡುಗೊರೆ
ಮಂಡ್ಯಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿಗೆ ವಿಶೇಷವಾದ ಉಡುಗೊರೆ ತಯಾರಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಧರಿಸುತ್ತಿದ್ದ ಮಾದರಿಯ ಪೇಟವನ್ನ ಉಡುಗೊರೆಯಾಗಿ ನೀಡಲು ಸಿದ್ಧತೆ ನಡೆದಿದೆ. ಬನಾರಸ್ ಸೀರೆ, ಮೋಲ್ಡ್ ಬಳಸಿ ಪೇಟ ತಯಾರಿಸಲಾಗಿದೆ.

ಕಲಾವಿದ ನವೀನ್‌ ಸಿಂಗ್‌ ಸತತ ಐದು ದಿನಗಳ ಶ್ರದ್ಧೆಯಿಂದ ಈ ಮಾಸ್ಟರ್‌ ಪೀಸ್‌ ತಯಾರು ಮಾಡಿದ್ದಾರೆ. ಕೆಂಪು ವರ್ಣದ ಮೈಸೂರು ರೇಷ್ಮೆ, ಬನಾರಸ್‌ ಸಾಫ್ಟ್‌ ಸಿಲ್ಕ್‌ ಅನ್ನು ಬಳಸಲಾಗಿದೆ. ಮಧ್ಯದಲ್ಲಿ ಮೈಸೂರಿನ ರಾಜ ಲಾಂಛನ ಗಂಡುಬೇರುಂಡವನ್ನು ಸೇರಿಸಲಾಗಿದೆ. ಎರಡೂಕಡೆ ಸಣ್ಣ ಸಣ್ಣ ಮುತ್ತುಗಳನ್ನು ಪೋಣಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !