ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಇಂದು ವರ್ಚ್ಯುಯಲ್ ಆಗಿ ಮಾತನಾಡಲಿದ್ದಾರೆ.
ನಿನ್ನೆ ಕೇಂದ್ರ ಬಜೆಟ್ ಮಂಡನೆ ಮಾಡಿದ ಬೆನ್ನಲ್ಲೇ ಪ್ರಧಾನಿ ಮೋದಿ ಇಂದು ಮಾತನಾಡಲಿದ್ದಾರೆ.
ವರ್ಚ್ಯುಯಲ್ ಭಾಷಣ ಕೇಳಲು, ದೇಶಾದ್ಯಂತ ಜಿಲ್ಲಾ ಮಟ್ಟದ ಆಯ್ದ ಸ್ಥಳಗಳಲ್ಲಿ ಎಲ್‌ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿದೆ. ಇಂದು ಬಜೆಟ್ ಬಗ್ಗೆ ಪ್ರಧಾನಿ ಮೋದಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಆದರೂ ಕೆಲವೇ ದಿನಗಳಲ್ಲಿ ಪಂಚರಾಜ್ಯ ಚುನಾವಣೆ ನಡೆಯಲಿರುವುದರಿಂದ ಈ ಭಾಷಣ ಮಹತ್ವದ್ದಾಗಿದೆ.