ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲೋಕ ಸಭೆ ಚುನಾವಣೆ ಕಾವು ಹೆಚ್ಚುತ್ತಿದ್ದು, ಈ ನಡುವೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭರ್ಜರಿ 3 ಕಿ.ಮೀ. ರೋಡ್ ಶೋ ನಡೆಸಲಿದ್ದಾರೆ.
ಇದಕ್ಕಾಗಿ ಸ್ಥಳೀಯ ಬಿಜೆಪಿ ನಾಯಕರು ರೋಡ್ ಮ್ಯಾಪ್ ಸಿದ್ಧಪಡಿಸಿ ಹೈಕಮಾಂಡ್ ಹಾಗೂ ಭದ್ರತಾ ಪಡೆಗೆ ನೀಡಲಿದ್ದಾರೆ.
ಲೋಕಸಭಾ ಚುನಾವಣೆ ಅಂಗವಾಗಿ ಏಪ್ರಿಲ್ 14ರಂದು ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಜೊತೆಗೆ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಕ್ಷೇತ್ರ ಹೆಬ್ಬಾಳದಲ್ಲಿಯೂ ಪ್ರಧಾನಿ ಮೋದಿ ಪ್ರಚಾರ ರೋಡ್ ಶೋ ಮಾಡಲಿದ್ದಾರೆ. ಈ ಎರಡು ಎರಡು ಮಾರ್ಗಗಳಲ್ಲಿ ರೋಡ್ ಶೋ ಮಾಡಬೇಕಾಗಿ ರಾಜ್ಯ ಬಿಜೆಪಿ ನಾಯಕರು ಪ್ರಧಾನಿ ಕಚೇರಿಗೆ ನೀಡಿದ್ದಾರೆ. ಬರೋಬ್ಬರಿ 3 ಕಿ.ಮೀ ರೋಡ್ ಷೋ ಮಾಡಲು ಲೆಕ್ಕಾಚಾರ ಹಾಕಲಾಗಿದೆ. ಪ್ರಧಾನಿ ರೋಡ್ ಷೋ ಮೂಲಕ ನಗರ ಈ ಕ್ಷೇತ್ರಗಳಲ್ಲಿನ ಮತದಾರರ ಸೆಳೆಯಲು ಬಿಜೆಪಿ ಪ್ಲಾನ್ ಮಾಡಿದೆ.
ಪ್ರಧಾನಿ ಮೋದಿ ಅವರು ಏ.14ರಂದು ಮಂಗಳೂರಿನಲ್ಲಿ ಏರ್ಪಡಿಸಲಾಗಿರವ ಬಿಜೆಪಿ ಸಮಾವೇಶವನ್ನು ಮುಗಿಸಿ ಅಲ್ಲಿಂದ ದೇವನಹಳ್ಳಿಗೆ ಬರುತ್ತಾರೆ. ಅಲ್ಲಿಂದ ಸೀದಾ ಬಿಜೆಪಿ ನಾಯಕರು ಕಳಿಸಿದ ಮಾರ್ಗದಲ್ಲಿ ರೋಡ್ ಶೋ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.