ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಇಂದು ಹೊಸ ಸಂಸತ್ ಭವನವನ್ನು ಉದ್ಘಾಟಿಸಿದ್ದಾರೆ. ಹೊಸ ಸಂಸತ್ತಿನ ಒಳಗೆ ಪ್ರಧಾನಿ ಮೋದಿ ಪ್ರವೇಶಿಸುತ್ತಿದ್ದಂತೆ ಸದನದ ಒಳಗಿದ್ದ ಸದಸ್ಯರು ಎದ್ದು ನಿಂತು ಮೋದಿಗೆ ಚಪ್ಪಾಳೆ ತಟ್ಟುವ ಮೂಲಕ ಗೌರವ ಸೂಚಿಸಿದರು. ಅಲ್ಲದೆ ಮೋದಿ ಮೋದಿ ಎಂಬ ಘೋಷಣೆಗಳ ಮೂಲಕ ಭವ್ಯವಾಗಿ ಸ್ವಾಗತಿಸಿದ್ದಾರೆ.
ಬೆಳಗ್ಗೆ 7.30ರಿಂದ ಹೊಸ ಸಂಸತ್ ಭವನದ ವಿಧಿ-ವಿಧಾನಗಳು ಆರಂಭವಾದವು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಪ್ರಧಾನಿ ಮೋದಿ ಪೂಜಾ-ಕೈಂಕರ್ಯದಲ್ಲಿ ಭಾಗಿಯಾಗಿದ್ದರು. ಬಳಿಕ ಅಧೀನಂ ಶ್ರೀಗಗಳಿಂದ ಪಡೆದ ರಾಜದಂಡ ಸೆಂಗೋಲ್ ಅನ್ನು ಲೋಕಸಭಾ ಸ್ಪೀಕರ್ ಸ್ಥಾನದ ಬಳಿ ಮೋದಿ ಪ್ರತಿಷ್ಠಾಪಿಸಿದರು. ಇದಾದ ಬಳಿಕ ಕೆಲ ಕಾಲ ಕಾರ್ಯಕ್ರಮಕ್ಕೆ ವಿರಾಮ ನೀಡಲಾಯಿತು.
ಇದೀಗ ಎರಡನೇ ಹಂತದ ಕಾರ್ಯಕ್ರಮ ಆರಂಭವಾಗಿದೆ. ಹೊಸ ಸಂಸತ್ ಕಟ್ಟಡದಲ್ಲಿ ಕಾರ್ಯಕ್ರಮ ಆರಂಭವಾಗಿದ್ದು, ಪ್ರಧಾನಿ ಮೋದಿ ಅವರು ಸಂಸತ್ ಪ್ರವೇಶಿಸುತ್ತಿದ್ದಂತೆ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೇರಿದಂತೆ ಅನೇಕ ಸದಸ್ಯರುಗಳು ಎದ್ದು ನಿಂತು ಪ್ರಧಾನಿ ಮೋದಿ ಅವರಿಗೆ ಚಪ್ಪಾಳೆ ತಟ್ಟುವ ಮೂಲಕ ಗೌರವ ನೀಡಿದರು.