ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನೂತನ ಸಂಸತ್ ಭವನದ ಲೋಕಾರ್ಪಣೆಯ ನಂತರ ನಡೆದ ಎರಡನೇ ಹಂತದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಭವನದ ಉದ್ಘಾಟನಾ ಸಮಾರಂಭದ ಸ್ಮರಣಾರ್ಥ ವಿಶೇಷ ಅಂಚೆ ಚೀಟಿ ಮತ್ತು 75 ರೂಪಾಯಿಯ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಿದರು.
75ರೂ ನಾಣ್ಯದ ವಿಶೇಷತೆ ಏನು?
ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಲಾಂಛನ ಇರಲಿದ್ದು, ಅದರ ಕೆಳಗೆ ಸತ್ಯಮೇವ ಜಯತೆ ಎಂಬ ಪದಗಳಿರಲಿವೆ. ಎಡಭಾಗದಲ್ಲಿ “ಭಾರತ್” ಎಂಬ ಪದವನ್ನು ದೇವನಾಗರಿ ಲಿಪಿಯಲ್ಲಿ ಮತ್ತು ಬಲಭಾಗದಲ್ಲಿ “ಇಂಡಿಯಾ” ಎಂಬ ಪದವನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ರೂಪಾಯಿ ಚಿಹ್ನೆ ಮತ್ತು ಸಿಂಹದ ಲಾಂಛನದ ಕೆಳಗೆ ಅಂತಾರಾಷ್ಟ್ರೀಯ ಅಂಕಿಗಳಲ್ಲಿ 75ರ ಮುಖಬೆಲೆಯ ಮೌಲ್ಯವನ್ನೂ ಹೊಂದಿರಲಿದೆ.
ನ್ಯಾಣದ ಮತ್ತೊಂದು ಬದಿಯಲ್ಲಿ ಸಂಸತ್ ಸಂಕೀರ್ಣದ ಫೋಟೋ ಇರಲಿದೆ. ನಾಣ್ಯದ ಮೇಲಿನ ಪರಿಧಿಯಲ್ಲಿ ದೇವನಾಗರಿ ಲಿಪಿಯಲ್ಲಿ ಸಂಸದ್ ಸಂಕುಲ್ ಎಂದು ಹಾಗೂ ಕೆಳಗಿನ ಪರಿಧಿಯಲ್ಲಿ ಪಾರ್ಲಿಮೆಂಟ್ ಕಾಂಪ್ಲೆಕ್ಸ್ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ.
35 ಗ್ರಾಂ ತೂಕದ ನಾಣ್ಯ
ಈ ನಾಣ್ಯವು 44 ಮಿಲಿಮೀಟರ್ ವ್ಯಾಸವನ್ನು ಹೊಂದಿರುವ ವೃತ್ತಾಕಾರದಲ್ಲಿರುತ್ತದೆ ಮತ್ತು ಅದರ ಅಂಚುಗಳ ಉದ್ದಕ್ಕೂ 200 ತೋಡು ಅಂಚನ್ನು ಹೊಂದಿರುತ್ತದೆ. 50% ಬೆಳ್ಳಿ, 40% ತಾಮ್ರ, 5% ನಿಕಲ್ ಮತ್ತು 5% ಸತುವನ್ನು ಒಳಗೊಂಡಿರುವ ನಾಲ್ಕು ಲೋಹಗಳ ಮಿಶ್ರಣದಿಂದ 35 ಗ್ರಾಂ ತೂಕದ ನಾಣ್ಯವನ್ನು ತಯಾರಿಸಲಾಗುತ್ತದೆ.