ʻಮನ್ ಕಿ ಬಾತ್ʼ’: ಕೊನೆಯ ಸಂಚಿಕೆಯ ನಿಯತಕಾಲಿಕೆಯನ್ನು ಹಂಚಿಕೊಂಡ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಏಪ್ರಿಲ್ 24 ರಂದು ನಡೆಯುವ ʻಮನ್ ಕಿ ಬಾತ್‌ ʼನ ಕೊನೆಯ ಸಂಚಿಕೆಯನ್ನು ಆಧರಿಸಿದ ನಿಯತಕಾಲಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಹಂಚಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಪ್ರಧಾನಿ ಮೋದಿ, ʻಕಳೆದ ತಿಂಗಳ #MannKiBaat ನಲ್ಲಿನ ಆಸಕ್ತಿದಾಯಕ ನಿಯತಕಾಲಿಕೆ ಇಲ್ಲಿದೆ. ಇದರಲ್ಲಿ ನಾವು ಭಾರತದ ರಫ್ತು ಜಿಗಿತ, ಆಯುರ್ವೇದ ಸ್ಟಾರ್ಟ್-ಅಪ್‌ಗಳು, ನೀರಿನ ಸಂರಕ್ಷಣೆ ಮತ್ತು ಸಾಂಪ್ರದಾಯಿಕ ವಿಷಯಗಳಂತಹ ವೈವಿಧ್ಯಮಯ ವಿಷಯಗಳನ್ನು ಚರ್ಚಿಸಿದ್ದೇವೆ. ಇನ್ನೂ,ಏಪ್ರಿಲ್ 24 ರಂದು ಹಲವು ಆಸಕ್ತಿದಾಯಕ ವಿಷಯಗಳೊಂದಿಗೆ ಮುಂದಿನ ಸಂಚಿಕೆಯಲ್ಲಿ ಭಾಗವಹಿಸಿ ಎಂದು ತಿಳಿಸಿದ್ದಾರೆ.
ನರೇಂದ್ರ ಮೋದಿ ಅವರ ಮನ್ ಕಿ ಬಾತ್‌ನ 88ನೇ ಸಂಚಿಕೆಯು 24ನೇ ಏಪ್ರಿಲ್ 2022 ರಂದು ಪ್ರಸಾರವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!