ನಾಳೆ ಜಾಲ್ನಾ- ಮುಂಬೈ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಜಾಲ್ನಾ- ಮುಂಬೈ ವಂದೇ ಭಾರತ್‌ ಎಕ್ಸ್‌ಪ್ರೆಸ್‌ನ ಸಂಚಾರಕ್ಕೆ ವರ್ಚುವಲ್‌ ಆಗಿ ಹಸಿರು ನಿಶಾನೆ ತೋರುವರು ಎಂದು ಕೇಂದ್ರೀಯ ರೈಲ್ವೆ ಅಧಿಕಾರಿ ಹೇಳಿದ್ದಾರೆ.

ಮರು ಅಭಿವೃದ್ಧಿಗೊಂಡ ಅಯೋಧ್ಯಾ ಧಾಮ್‌ ರೈಲು ನಿಲ್ದಾಣದಲ್ಲಿ ನಡೆಯುವ ಸಮಾರಂಭದಲ್ಲಿ ಎರಡು ಅಮೃತ್‌ ಭಾರತ್‌ ರೈಲುಗಳು ಮತ್ತು ಇತರ ಐದು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸೇವೆಗೆ ಕೂಡ ಅವರು ಹಸಿರು ನಿಶಾನೆ ತೋರಲಿದ್ದಾರೆ.

ಜಾಲ್ನಾ- ಮುಂಬೈ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಮಹಾರಾಷ್ಟ್ರದ 7ನೇ ವಂದೇ ಭಾರತ್‌ ರೈಲು ಆಗಿದ್ದು ಮುಂಬೈನಿಂದ ಸಂಚರಿಸುವ ಐದನೇ ವಂದೇ ಭಾರತ್‌ ಸೇವೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!