ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಚುನಾವಣಾ ಆಯೋಗವು 2024ರ ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದೆ. ದೇಶದ 543 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.
ಕೇಂದ್ರ ಚುನಾವಣಾ ಆಯೋಗವು ದಿನಾಂಕಗಳನ್ನು ಪ್ರಕಟಿಸಿದ ತಕ್ಷಣ ಪ್ರಧಾನಿ ಮೋದಿ “ಫಿರ್ ಏಕ್ ಬಾರ್ ಮೋದಿ ಸರ್ಕಾರ್” ಎಂದು ಟ್ವೀಟ್ ಮಾಡಿದ್ದಾರೆ.
ಇದರರ್ಥ ಮೋದಿ ಸರ್ಕಾರ ಮತ್ತೊಮ್ಮೆ ಬರಲಿದೆ ಎಂದು ಸೂಚಿಸುತ್ತದೆ. ಚುನಾವಣಾ ಆಯೋಗವು 2024 ರ ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದೆ. ಬಿಜೆಪಿ-ಎನ್‌ಡಿಎ ಚುನಾವಣೆಗೆ ನಾವು ಸಜ್ಜಾಗಿದ್ದೇವೆ. “ಎಲ್ಲಾ ಜಿಲ್ಲೆಗಳಲ್ಲಿ ಉತ್ತಮ ಆಡಳಿತ ಮತ್ತು ವಿವಿಧ ಕ್ಷೇತ್ರಗಳ ನಿರ್ವಹಣೆಯ ಅನುಭವದ ಆಧಾರದ ಮೇಲೆ ನಾವು ಜನರನ್ನು ತಲುಪುತ್ತಿದ್ದೇವೆ” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
The biggest festival of democracy is here! EC has announced the 2024 Lok Sabha election dates. We, the BJP-NDA, are fully prepared for elections. We are going to the people on the basis of our track record of good governance and service delivery across sectors.…
— Narendra Modi (@narendramodi) March 16, 2024