ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರ ಬ್ರೆಜಿಲ್ ಭೇಟಿಗೆ ಅಲ್ಲಿನ ಭಾರತೀಯ ಸಮುದಾಯ ಸಂತಸ ವ್ಯಕ್ತಪಡಿಸಿದೆ.
17ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ರಿಯೊ ಡಿ ಜೆನೆರಿಯೊಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅನಿವಾಸಿ ಭಾರತೀಯರು ಭವ್ಯವಾಗಿ ಸ್ವಾಗತಿಸಿದರು. ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಭಾರತ ಕೈಗೊಂಡಿದ್ದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ಚಿತ್ರಿಸುವ ಹೆಮ್ಮೆಯ ಪ್ರದರ್ಶನದ ಮೂಲಕ ಅಲ್ಲಿನ ಭಾರತೀಯರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬರ ಮಾಡಿಕೊಂಡರು.
ಈ ಸಂಭ್ರಮವನ್ನು ಹಂಚಿಕೊಂಡಿರುವ ಭಾರತೀಯ ನಾಗರಿಕರು, ಭಾರತದ ಪ್ರಗತಿ ಹೆಮ್ಮೆ ಮೂಡಿಸುತ್ತದೆ. ಆರ್ಥಿಕತೆ ಮಾತ್ರವಲ್ಲದೆ ಭದ್ರತೆಯ ವಿಷಯದಲ್ಲೂ ನಾವು ಮುಂದಕ್ಕೆ ಸಾಗಿದ್ದು, ಇದಕ್ಕೆ ಆಪರೇಷನ್ ಸಿಂದೂರ್ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಪ್ರಧಾನಿ ಅವರನ್ನು ಭೇಟಿಯಾಗಿದ್ದು ನನ್ನ ಬದುಕಿನ ಅಪೂರ್ವ ಕ್ಷಣಗಳಲ್ಲಿ ಒಂದು ಎಂದು ಇನ್ನೊಬ್ಬರು ಭಾರತೀಯ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ