ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ಇಂದು 69ನೇ ಮಹಾಪರಿನಿರ್ವಾಣ ದಿವಸ್ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಸಂಸತ್ ಭವನದ ಲಾನ್ಸ್‌ನಲ್ಲಿ ಡಾ ಬಿಆರ್ ಅಂಬೇಡ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಸಮಾನತೆ ಮತ್ತು ಮಾನವ ಘನತೆಗಾಗಿ ಅಂಬೇಡ್ಕರ್ ಅವರ ದಣಿವರಿಯದ ಹೋರಾಟವು ಪೀಳಿಗೆಗೆ ಸ್ಫೂರ್ತಿ ನೀಡುತ್ತಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಪ್ರಧಾನಿ ಹೇಳಿದ್ದಾರೆ.
“ಮಹಾಪರಿನಿರ್ವಾಣ ದಿವಸ್‌ನಲ್ಲಿ, ನಮ್ಮ ಸಂವಿಧಾನದ ಶಿಲ್ಪಿ ಮತ್ತು ಸಾಮಾಜಿಕ ನ್ಯಾಯದ ದಾರಿದೀಪ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ನಾವು ನಮಿಸುತ್ತೇವೆ. ಸಮಾನತೆ ಮತ್ತು ಮಾನವ ಘನತೆಗಾಗಿ ಡಾ. ಅಂಬೇಡ್ಕರ್ ಅವರ ಅವಿರತ ಹೋರಾಟವು ಪೀಳಿಗೆಗೆ ಸ್ಫೂರ್ತಿ ನೀಡುತ್ತಿದೆ. ಇಂದು ನಾವು ಅವರ ಕೊಡುಗೆಗಳನ್ನು ಸ್ಮರಿಸುತ್ತೇವೆ. ಅವರ ದೃಷ್ಟಿಯನ್ನು ಈಡೇರಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇನೆ ಜೈ ಭೀಮ್!” ಎಂದು ಎಕ್ಸ್ ನಲ್ಲಿ ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.