4 ವರ್ಷಗಳ ಬಳಿಕ ಪಾಕ್ ಗೆ ಮರಳಿದ ಮಗನನ್ನು ಕಂಡು ತಬ್ಬಿ ಸ್ವಾಗತಿಸಿದ ಪ್ರಧಾನಿ ಶೆಹಬಾಜ್ ಷರೀಫ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

4 ವರ್ಷಗಳ ನಂತರ ಭ್ರಷ್ಟಾಚಾರದ ಆರೋಪದಿಂದ ತಲೆ ಮರೆಸಿಕೊಂಡಿದ್ದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಮಗ ಸುಲೇಮಾನ್ ಶೆಹಬಾಜ್ ಭಾನುವಾರ ಪಾಕಿಸ್ತಾನಕ್ಕೆ ಮರಳಿದ್ದಾರೆ.

ಪಾಕ್ ಪ್ರಧಾನಿಯ ಮಗನ ವಿರುದ್ಧ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿ (FIA) 2018ರಲ್ಲಿ ಕೇಸ್ ದಾಖಲಿಸಿತ್ತು. ಅಂದಿನಿಂದ ಅವರ ಕುಟುಂಬ ಪಾಕಿಸ್ತಾನವನ್ನು ಬಿಟ್ಟು ಲಂಡನ್​ನಲ್ಲಿ ನೆಲೆಸಿತ್ತು.

ಬಳಿಕ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (ಎನ್‌ಎಬಿ) ಸುಲೇಮಾನ್ ಅವರನ್ನು ಬಂಧಿಸದಂತೆ ಇಸ್ಲಾಮಾಬಾದ್ ಹೈಕೋರ್ಟ್ ನಿರ್ಬಂಧ ಹೇರಿತ್ತು. ಇದೀಗ ಕೆಲವು ದಿನಗಳ ನಂತರ ಸುಲೇಮಾನ್ ಪಾಕಿಸ್ತಾನಕ್ಕೆ ವಾಪಸಾಗಿದ್ದಾರೆ.

ಮಗನನ್ನು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ತಬ್ಬಿಕೊಂಡು ಸ್ವಾಗತಿಸಿರುವ ವಿಡಿಯೋ ಟ್ವಿಟ್ಟರ್​ನಲ್ಲಿ ಹರಿದಾಡುತ್ತಿದೆ.
2018ರಿಂದ ಲಂಡನ್‌ನಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ ಸುಲೇಮಾನ್, ತನ್ನ ತಂದೆಯ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದಾರೆ. ನಂತರ ಶೆಹಬಾಜ್ ಷರೀಫ್ ತನ್ನ ಮಗನನ್ನು ತಬ್ಬಿಕೊಂಡಿದ್ದಾರೆ.

ಸುಲೇಮಾನ್ ಅವರ ಜಾಮೀನು ಅರ್ಜಿಯ ವಿಚಾರಣೆ ವೇಳೆ ಮಂಗಳವಾರದೊಳಗೆ ಶರಣಾಗುವಂತೆ ಇಸ್ಲಾಮಾಬಾದ್ ಹೈಕೋರ್ಟ್ ಸೂಚಿಸಿದೆ. ಸುಲೇಮಾನ್ ಅವರು ಬಂದ ನಂತರ ನ್ಯಾಯಾಲಯಕ್ಕೆ ಹಾಜರಾಗಲು ಜಾಮೀನು ಕೋರಿದ್ದಾರೆಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here